ಖಾನಾಪುರ ಸಮಗ್ರ ಅಭಿವೃದ್ಧಿಗೆ ಬದ್ಧ

9Kanapur1
Published on

ಖಾನಾಪುರ: ಪಟ್ಟಣ ಅಧಿಕ ಸಾಮರ್ಥ್ಯದ ದೀಪಗಳಿಂದ ನಗರ ಕಂಗೊಳಿಸಲಿದೆ. ಖಾನಾಪುರದ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಯಡಿ ಅನುದಾನ ಮಂಜೂರಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಹೈಮಾಸ್ಟ್​ ವಿದ್ಯುತ್​ ದೀಪ ಉದ್ಘಾಟಿಸಿ ಮಾತನಾಡಿದ ಅವರು, ಮಾರುತಿ ನಗರದಲ್ಲಿನ ಎಲ್ಲ ರಸ್ತೆಗಳು ಸಿಸಿಕರಣಗೊಂಡಿವೆ. ಬಾಕಿ ಉಳಿದ ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.

ನಗರಸಭೆ ಅಧ್ಯೆ ಮೀನಾ ಬೆಲೂಕರ, ಉಪಾಧ್ಯೆ ಜಯಾ ಭೂತಕಿ, ಸ್ಥಾಯಿ ಸಮಿತಿ ಅಧ್ಯ ಅಪ್ಪಯ್ಯ ಕೊಡೋಳಿ, ಮುಖ್ಯಾಧಿಕಾರಿ ಸಂತೋಷ ಕುರಬೇಟ, ಸದಸ್ಯರಾದ ಮಝರ್​ ಖಾನಾಪುರಿ, ಲಕ್ಷ$್ಮಣ ಮಾದಾರ, ವಿನೋದ ಪಾಟೀಲ, ರಫೀಕ್​ ವಾರಿಮಣಿ, ಪ್ರಕಾಶ ಬೈಲೂರಕರ, ನಾರಾಯಣ ಒಗಲೆ, ತೋಹೀದ್​ ಚಾಂದಕನ್ನವರ, ಮೇಘಾ ಕುಂದರ್ಗಿ, ಲತಾ ಪಾಟೀಲ, ಲಕ್ಷಿ$್ಮ ಅಂಕಲಗಿ, ಗುಂಡು ತೋಪಿಣಕಟ್ಟಿ, ಅಮೃತ ಪಾಟೀಲ, ರವಿ ಕಾಡಗಿ, ಅಭಿಯಂತರಾದ ತಿರುಪತಿ ರಾಠೋಡ, ಗಂಗಾಧರ ಕಾಂಬಳೆ, ಪ್ರೇಮಾನಂದ ನಾಯ್ಕ, ರಾಜು ಜಾಂಬೋಟಿ, ಮೊಹಸೀನ್​ ಬಡೆರ್​ ಇತರರಿದ್ದರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net