

ಕೋಲಾರ: ಸಾರ್ವಜನಿಕರ ಕೆಲಸ ವಾಡಲು ಖಾತೆ ಯಾವುದಾದರೇನು, ಕಾಯಕವೇ ಕೈಲಾಸ ಅಂದುಕೊಂಡು ಜವಾಬ್ದಾರಿ ನಿರ್ವಹಿಸಬೇಕು ಎಂದು ಸಚಿವ ಮುನಿರತ್ನ ಅಸವಾಧಾನಗೊಂಡಿದ್ದ ಸಹೋದ್ಯೋಗಿಗಳಿಗೆ ಕಿವಿವಾತು ಹೇಳಿದರು.
ಕರೊನಾ 3ನೇ ಅಲೆ ನಿಯಂತ್ರಣಕ್ಕೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೈಗೊಂಡಿರುವ ಸಿದ್ಧತೆಗಳ ಪರಿಶೀಲನೆಗಾಗಿ ಗುರುವಾರ ಆಗಮಿಸಿದ್ದ ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ವಾತನಾಡಿ, ಖಾತೆ ವಿಚಾರವಾಗಿ ಸಚಿವ ಆನಂದ್ ಸಿಂಗ್ ವ್ಯಕ್ತಪಡಿಸಿದ್ದ ಅಸವಾಧಾನದಿಂದ ಸರ್ಕಾರಕ್ಕೆ ಸಮಸ್ಯೆಯೇ ಆಗಿರಲಿಲ್ಲ, ತಮಗಾಗಿದ್ದ ಬೇಸರವನ್ನು ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಅವರ ಬಳಿ ಹೇಳಿಕೊಂಡು ಬಗೆಹರಿಸಿಕೊಂಡಿದ್ದಾರೆ ಎಂದರು.
ರಾಜ್ಯದಲ್ಲಿ ಕರೊನಾ 3ನೇ ಅಲೆ ತಡೆಯಲು ಸರ್ಕಾರ ಸಜ್ಜಾಗಿದೆ, ಸಿಎಂ ಸೂಚನೆ ಮೇರೆಗೆ ನಾನು ಕೋಲಾರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದ ಉಸ್ತುವಾರಿ ಹೊತ್ತಿರುವೆ, ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ನಮ್ಮ ಕಡೆಯವರಿಂದ ವರದಿ ತರಿಸಿಕೊಂಡಿದ್ದು, ಕೇವಲ ಕಾಗದ ಪತ್ರಗಳ ಆಧಾರದ ಮೇಲೆ ತೀರ್ವಾನ ಕೈಗೊಳ್ಳದೆ ಇಡೀ ಜಿಲ್ಲೆಯಲ್ಲಿ ಪ್ರವಾಸ ವಾಡಿ ಆಸ್ಪತ್ರೆಗಳ ಪರಿಶೀಲನೆ ಬಳಿಕ ಜನರ ಆರೋಗ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವೆ ಎಂದರು.
ಜಿಲ್ಲೆಯಲ್ಲಿ ಕರೊನಾ 3ನೇ ಅಲೆ ತಡೆಯುವುದು ನನ್ನ ಮೊದಲ ಆದ್ಯತೆ. 3ನೇ ಅಲೆಯಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವೆ ಎಂದರು. ಲಸಿಕೆ ಪ್ರತಿಯೊಬ್ಬರಿಗೂ ಸಿಗಬೇಕು, ಈ ನಿಟ್ಟಿನಲ್ಲಿ ಜಿಲ್ಲೆಗೆ ಅಗತ್ಯವಾಗಿ ಬೇಕಾದ ಲಸಿಕೆ ಒದಗಿಸಲು ಪ್ರಾವಾಣಿಕವಾಗಿ ಪ್ರಯತ್ನಿಸುವೆ ಎಂದರು.
ರೈತರ ಸಮಸ್ಯೆಗೆ ಸ್ಪಂದನೆ: ಕರೊನಾದಿಂದ ರೈತರಿಗೆ ತೊಂದರೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ, ಲಾಕ್‌ಡೌನ್ ವೇಳೆ ರೈತರು ಬೆಳೆ ವಿಲೇವಾರಿ ವಾಡಲು ಸಾಧ್ಯವಾಗದೆ ರಸ್ತೆಗೆ ಎಸೆದಿರುವುದು ನೋವಿನ ಸಂಗತಿ, ನಷ್ಟಕ್ಕೆ ಒಳಗಾಗಿರುವ ರೈತರಿಗೆ ನ್ಯಾಯ ಸಿಗಬೇಕೆಂಬುದು ನನ್ನ ಆಸೆ, ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕಾಗಿರುವುದರಿಂದ ಮುಂದಿನ ದಿನಗಳಲ್ಲಿ ನನಗೆ ವಹಿಸಿರುವ ಇಲಾಖೆ ಕಡೆಗೂ ಗಮನ ಹರಿಸಿ ರೈತರ ಪರ ಕೆಲಸ ವಾಡುತ್ತೇನೆ ಎಂದರು.
ರಾಜಕೀಯ...ಎಲ್ಲವೂ ಸತ್ಯ ಆಗಿರಲಿಕ್ಕಿಲ್ಲ: ಸಂಸದ ಎಸ್.ಮುನಿಸ್ವಾಮಿ ಮತ್ತು ಬಂಗಾರಪೇಟೆ ಶಾಸಕ ಎಸ್.ಎನ್.ಮುನಿಸ್ವಾಮಿ ನಡುವೆ ನಡೆಯುತ್ತಿರುವ ರಾಜಕೀಯ ಸಮರಕ್ಕೆ ಸಂಬಂಧಿಸಿದಂತೆ ವಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿ ನನಗೆ ತಲುಪಿದೆ, ಒಬ್ಬರ ಮೇಲೊಬ್ಬರು ವಾಡುತ್ತಿರುವ ಆರೋಪದಲ್ಲಿ ಎಲ್ಲವೂ ಸತ್ಯ ಆಗಿರಲ್ಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆ, ಈ ಜಗಳ ರಾಜಕೀಯ ಸ್ವರೂಪ ಪಡೆದುಕೊಂಡಂತೆ ಕಾಣುತ್ತಿರುವುದರಿಂದ ಸಚಿವನಾಗಿ ನಾನು ಮಧ್ಯ ಪ್ರವೇಶ ವಾಡುವುದು ಸೂಕ್ತವಲ್ಲ, ದಾಖಲೆಗಳಿದ್ದರೆ ಸೂಕ್ತ ಕ್ರಮ ಕೈಗೊಳ್ಳಬಹುದು.
ರಾಜ್ಯದ ಅಭಿವದ್ಧಿ ಮತ್ತು 2023ರಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ದೊಡ್ಡ ಕೆಲಸ. ಸದ್ಯಕ್ಕೆ ಹೊಸ ಸಿನಿವಾಗಳ ಬಗ್ಗೆ ಆಲೋಚಿಸುತ್ತಿಲ್ಲ. ನಾನು ಮುಂಚೆ ತುಂಬಾ ಹಾರ್ಡ್ ಆಗಿದ್ದೆ, ಈಗ ಸಾಫ್ಟ್ ಆಗಿದ್ದೇನೆ, ಪ್ರಸ್ತುತ ಸನ್ನಿವೇಶಕ್ಕೆ ಈ ನಿರ್ಧಾರ ಸೂಕ್ತ. ಮುನಿರತ್ನ, ಸಚಿವ