ಖಾಕಿ ಬಂದೋಬಸ್ತ್ನಲ್ಲಿ ನಡೆದ ಪರೀಕ್ಷೆ

10ydg03
Published on


ಯಾದಗಿರಿ: ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆ ಭಾನುವಾರ ನಗರಾದಾದ್ಯಂತ ಖಾಕಿಪಡೆ ಬಂದೋಬಸ್ತ್ನಲ್ಲಿ ಜರುಗಿತು. ನಗರದ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ನೋಂದಣಿ ಮಾಡಿಕೊಂಡ ಒಟ್ಟು 2840 ಅಭ್ಯಥರ್ಿಗಳ ಪೈಕಿ 1954 ಹಾಜರಾಗಿದ್ದರು, 886 ಅಭ್ಯರ್ಥಿಗಳು ಗೈರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದ್ದಾರೆ.

ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಿಗಮ ಮಂಡಳಿಗಳಲ್ಲಿ ಖಾಲಿ ಇದ್ದ ಹುದ್ದೆಗಳ ಭರ್ತಿಗಾಗಿ ನಡೆದ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಪತ್ತೆಯಾಗಿ ದೊಡ್ಡ ಹಗರಣ ಬೆಳಕಿಗೆ ಬಂದಿತ್ತು. ಅಲ್ಲದೆ, ಈ ಅಕ್ರಮಕ್ಕೆ ಯಾದಗಿರಿ ಹಾಟ್ಸ್ಪಾಟ್ ಆಗಿ ರಾಜ್ಯದೆಲ್ಲೆಡೆ ಸುದ್ದಿಯಾಗಿತ್ತು. ಪ್ರಕರಣದಲ್ಲಿ 16ಕ್ಕೂ ಹೆಚ್ಚು ಆರೋಪಿಗಳನ್ನು ವಶ ಪಡಿಸಿಕೊಳ್ಳಲಾತ್ತು.

ಹೀಗಾಗಿ ಈ ಪರೀಕ್ಷೆಯಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿತ್ತು. ಕೇಂದ್ರದ ಎದುರು ಬಯೋಮೆಟ್ರಿಕ್ ಪರಿಶೀಲನಾಯಂತ್ರ ಅಳವಡಿಸಲಾಗಿತ್ತು. ಬೆಳಗ್ಗೆ 8.30ರಿಂದ ಕೇಂದ್ರದ ಹೊರಗೆ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ನಡೆಸಲಾಯಿತು. ಮೆಟಲ್ ಡಿಟೆಕ್ಟರ್ ಸಾಧನದ ಮೂಲಕ ಸಿಬ್ಬಂದಿಗಳು ಪರಿಶೀಲಿಸಿದರು.
ಇದಲ್ಲದೆ ಇಎನ್ಟಿ ತಜ್ಞರಿಂದ ಅಭ್ಯರ್ಥಿಗಳು ಕಿವಿ ತಪಾಸಣೆ ನಡೆಸಲಾಯಿತು. ಪ್ರತಿ ಕೊಠಡಿಗೆ 20 ಅಭ್ಯರ್ಥಿಗಳು ಕುಳಿತುಕೊಳ್ಳಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪ್ರತಿ ಕೇಂದ್ರಕ್ಕೆ ಓರ್ವ ಡಿವೈಎಸ್ಪಿ, ಸಿಪಿಐ, ಇಬ್ಬರು ಪಿಎಸ್ಐ ಹಾಗೂ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆಗೊಳಿಸಲಾಗಿತ್ತು. ಇದಲ್ಲದೆ ಪೊಲೀಸರಿಗೂ ಸಹ ಮೊಬೈಲ್ ಬಳಕೆಗೆ ಅವಕಾಶವಿರಲಿಲ್ಲ.

ಕೇಂದ್ರಗಳ ಸುತ್ತಮುತ್ತ ಸಾರ್ವಜನಿಕರ ಸಂಚಾರ ಬಂದ್ ಮಾಡಲಾಗಿತ್ತು. ಎಸ್ಪಿ ಜಿ.ಸಂಗೀತಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net