ಖರ್ಗೆಯಂತ ಹುಲಿ ಸೋಲಿಸಿದವರಿಗೆ ಇಲಿ ಕಷ್ಟವಲ್ಲ

BJP SOUTH
Published on

ಕಲಬುರಗಿ: 2019ರ ಲೋಕಸಭೆ ಚುನಾವಣೆಯಲ್ಲಿ ಈ ಭಾಗ ಹುಲಿಯಾಗಿದ್ದ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಬಿಜೆಪಿ ಸೋಲಿಸಿತ್ತು. ಈ ಬಾರಿ ಇಲಿಯಂತಿರುವ ಅಭ್ಯರ್ಥಿಯನ್ನು ಸೋಲಿಸುವುದು ಕಷ್ಟವಿಲ್ಲ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದರು.
ಲೋಕಸಭೆ ಚುನಾವಣೆ ನಿಮಿತ್ತ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಗುಲ್ಬರ್ಗ ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಎಐಸಿಸಿ ಅಧ್ಯಕ್ಷ ಡಾ.ಖರ್ಗೆರನ್ನು ಒಂದು ಲಕ್ಷ ಅಂತರದಿಂದ ಸೋಲಿಸಿದ್ದೇವೆ. ಸೋಲಿನ ಭೀತಿಯಿಂದ ತಮ್ಮ ಅಳಿಯನನ್ನು ಕಣಕ್ಕೆ ಇಳಿಸಿದ್ದಾರೆ ಎಂದು ಕಾಲೆಳೆದರು.
ಈ ಬಾರಿ ಎರಡು ಲಕ್ಷ ಮುನ್ನಡೆಯೊಂದಿಗೆ ಡಾ.ಉಮೇಶ ಜಾಧವ್ ಲೋಕಸಭೆಯಲ್ಲಿ ಜಯಶಾಲಿಯಾಗಲಿದ್ದಾರೆ. ಚಂದು ಪಾಟೀಲ್ ಮತ್ತು ದತ್ತಾತ್ರೇಯ ಪಾಟೀಲï ಜೋಡಿಯಾಗಿ ಕಣದಲ್ಲಿ ಅಹರ್ನಿಶಿ ದುಡಿಯುತ್ತಿದ್ದು, ಉತ್ತರ, ದಕ್ಷಿಣದಲ್ಲಿ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ಕಳೆದ ಬಾರಿ ಅಫಜಲಪುರ, ಜೇವರ್ಗಿ ಮೊದಲ, ಎರಡನೇ ಸ್ಥಾನದಲ್ಲಿ ಬಿಜೆಪಿಗೆ ಮುನ್ನಡೆ ನೀಡಿದ್ದವು. ಅದಕ್ಕಾಗಿ ಜಾಧವ್ ಎರಡು ಮತಕ್ಷೇತ್ರಗಳಿಗೆ ಭಾರತ್ ಮಾಲಾ ಹೆದ್ದಾರಿ ನೀಡಿದ್ದಾರೆ. ಅತನೂರು ಮತ್ತು ಜೇವರ್ಗಿಯಲ್ಲಿ ರಸ್ತೆಯನ್ನು ಪ್ರವೇಶಿಸಲು ಅನುಕೂಲ ಮಾಡಲಾಗಿದೆ. ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಮಾಡಲು ಬಿಜೆಪಿಯನ್ನು ಗೆಲ್ಲಿಸಬೇಕಿದೆ ಎಂದರು.

ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣವಿದೆ. ಸಂಕಷ್ಟದಲ್ಲಿರುವ ಪಕ್ಕದ ರಾಷ್ಟçಗಳ ಹಿಂದುಗಳಿಗೆ ನೆರವು ನೀಡಲಾಗುತ್ತಿದೆ. ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಾಣುತ್ತಿವೆ. ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಮೋದಿ ಅವರ ನೇತೃತ್ವಕ್ಕೆ ಜಯ ತಂದುಕೊಡಲು ಮತದಾರರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್, ವಿಶಾಲ ದರ್ಗಿ, ಉಮೇಶ ಪಾಟೀಲ್, ದಯಾಘನ ಧಾರವಾಡಕರ, ವಿದ್ಯಾಸಾಗರ ಶಾಬಾದಿ, ಅವಿನಾಶ ಕುಲ್ಕರ್ಣಿ, ಶಿವಕಾಂತ ಮಹಾಜನ್, ಸಂಜಯ ಮಿಸ್ಕಿನ್, ಶಿವಯೋಗಿ ನಾಗನಹಳ್ಳಿ, ಚಂದ್ರಶೇಖರ ಹಿರೇಮಠ, ಶೋಭಾ ಪಾಟೀಲ್, ರಾಜು ವಾಡೇಕರ, ಗಣೇಶ ವಳಕೇರಿ, ಅಪ್ಪು ಕಣಕಿ, ಮಹಾದೇವ ಬೆಳಮಗಿ, ಶ್ರೀನಿವಾಸ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net