

ಕಲಬುರಗಿ: ಆಂದೋಲಾ ಕರುಣೇಶ್ವರ ಮಠದ ನಗರದ ಶಾಖಾ ಮಠದ ಕಟ್ಟಡ ತೆರವಿಗೆ ಪಾಲಿಕೆ, ಜಿಲ್ಲಾ ಉಸ್ತುವಾರಿ ಸಚಿವರು ಹಠಕ್ಕೆ ಬಿದ್ದು ಒಡೆಯಲು ಮುಂದಾಗಿದ್ದರು. ಇದೀಗ ನಗರದ ಪ್ರತಿಷ್ಠಿತರ ಮನೆಗಳು ಅಕ್ರಮ, ಪರವಾನಗಿ ಇಲ್ಲದ ಮನೆಗಳ ತೆರವಿಗೆ ಹೈಕೋರ್ಟ್ ಆದೇಶಿದ್ದು, ಸಚಿವ ಖರ್ಗೆ ಬುಲ್ಡೋಜರ್ ಬಾಬಾ ಆಗಿ ಆದೇಶ ಪಾಲಿಸಲಿ ಎಂದು ಶ್ರೀರಾಮ ಸೇನೆ ರಾಜ್ಯ ಗೌರವಾಧ್ಯP್ಷÀ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಪರವಾನಗಿ ಇಲ್ಲದೆ ಕಟ್ಟಲಾದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಸಚಿವ ಪ್ರಿಯಾಂಕ್ ಖರ್ಗೆ `ಬುಲ್ಡೋಜರ್ ಬಾಬಾ' ಆಗಲಿ. ಹಿಂದೊಮ್ಮೆ ಅಕ್ರಮ ಕಟ್ಟಡಗಳ ತೆರವಿನ ವಿಷಯ ಬಂದಾಗ ನಾನು ಬುಲ್ಡೋಜರ್ ಬಾಬಾ ಆದರೆ ಎಲ್ಲ ಸರಿ ಹೋಗುತ್ತದೆ ಎಂದು ಸಚಿವ ಹೇಳಿದ್ದರು. ಹೈ ಕೋರ್ಟ್ ಪೀಠ ಆದೇಶಿಸಿದ್ದು, ಸಂವಿಧಾನದ ಭಕ್ತರಾಗಿದ್ದರೆ ಕಷಾಯ ವಸ ತೊಟ್ಟು `ಬುಲ್ಡೋಜರ್ ಬಾಬಾ' ಆಗಿ, ಅಕ್ರಮ ಕಟ್ಟಡಗಳ ತೆರವು ಮಾಡಲಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಎರಡು ತಿಂಗಳಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ ಕೋರ್ಟ್ ಹೇಳಿದೆ. ನಗರದಲ್ಲಿ ಅವರz್ದೆÃ ಶಿಕ್ಷಣ ಸಂಸ್ಥೆಯ ಐದು ಕಟ್ಟಡ, ಕೆಬಿಎನ್ ಆಸ್ಪತ್ರೆ, ಮೈಬಾಜ್ ಮಸೀದಿ ಸುತ್ತಲಿನ ಪ್ರದೇಶ, ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಮನೆ, ಇಲಿಯಾಸ್ ಬಾಗವಾನ್ ಮನೆ ಹಾಗೂ ಪರವಾನಗಿ ಇಲ್ಲದೆ ಹಳೇ ಕಟ್ಟಡ ದ್ವಂಸ ಮಾಡಿ ಹೊಸದು ನಿರ್ಮಿಸುತ್ತಿರುವ ರಾಜು ಜಾನೆ ಕಟ್ಟಡ,, ಪಾಲಿಕೆ ಉಪ ಆಯುಕ್ತ ರಮೇಶ ಪಟ್ಟೆದಾರ ಮನೆ ತೆರವು ಮಾಡಿ, ಸಂವಿಧಾನದ ನಿಜ ಭಕ್ತರೆಂದು ತೋರಿಸಿ ಎಂದು ಸವಾಲು ಹಾಕಿದರು.
ನಗರದಲ್ಲಿ ಹಲವು ಅಕ್ರಮ ಕಟ್ಟಡಗಳಿದ್ದರೂ ಆಂದೋಲಾ ಕರುಣೇಶ್ವರ ಶಾಖಾ ಮಠದ ವಿರುದ್ಧ ದ್ವೇಷ ಸಾಧಿಸಿದ್ದಾರೆ. ಇದೀಗ ಪರವಾನಗಿ ಇಲ್ಲದೆ ಕಟ್ಟಿದ ಕಟ್ಟಡಗಳ ಮಾಹಿತಿ ಕೋರ್ಟ್ ಹಾಗೂ ಸಚಿವರಿಗೆ ನೀಡಿದ್ದೂ ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ ಎಂದು ಹೇಳಿದರು.
ಖರ್ಗೆ ಒಡೆತನದ ಫಾಲಿ ಸಂಸ್ಥೆಯ ಭೂ ಅಕ್ರಮದ ಕುರಿತು ಮಾತನಾಡಿದ್ದಕ್ಕೆ ನಮ್ಮ ಮಠಕ್ಕೆ ನೋಟಿಸ್ ನೀಡಿದ್ದರು. ಪಾಲಿಕೆ ಆಯುಕ್ತರು ಸಚಿವರ ಒತ್ತಡದಿಂದ ನಮ್ಮ ಮಠಕ್ಕೆ ನೋಟಿಸ್ ನೀಡಿದ್ದರು. ನ್ಯಾಯಾಲಯಕ್ಕೆ ಹೋಗಿ ತಡೆ ತರಲಾಗಿದೆ. ಅಕ್ರಮವಾಗಿ ಕಟ್ಟಿದ್ದು, ಉರುಳಿಸುವಂತೆ ಹೈ ಕೋರ್ಟ್ ಆದೇಶಿದೆ. ತೀರ್ಪಿನ ಪರಾಮರ್ಶೆಗೆ ವಿಭಾಗೀಯ ಪೀಠಕ್ಕೆ ಮನವಿ ಮಾಡಿz್ದÉÃವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ವೈಯಕ್ತಿಕ ಹಗೆ ಇಲ್ಲ. ಸಚಿವರಿಗೆ ಹಗೆ ಇರುವುದರಿಂದ `ನಕಲಿ ಸ್ವಾಮೀಜಿ' ಎಂದು ವೈಯಕ್ತಿಕ ತೇಜೋವಧೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಪ್ರಶಾಂತ ಗುಡ್ಡಾ, ಸತೀಶ ಮಾಹೂರ, ಮಲಕ್ಕಣ್ಣ ಪೂಜಾರಿ, ಈಶ್ವರ ಹಿಪ್ಪರಗಿ, ರಾಕೇಶ ಜಮಾದಾರ, ರೋಹಿತ್, ಹುಲ್ಲೇಶ ಕಾಸರಬೋಸಗಾ ಇತರರಿದ್ದರು.