ಖರ್ಗೆ ಹೇಳಿಕೆ ಖಂಡನೀಯ

23Rayabag1
Published on

ರಾಯಬಾಗ: ಹೊಸಪೇಟೆಯಲ್ಲಿ ಈಚೆಗೆ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಡ-ಜಂಗಮ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ ಎಂದು ಅರ್ಚಕ ಮತ್ತು ಪುರೋಹಿತರ ರಾಜ್ಯ ಘಟಕದ ಅಧ್ಯಕ್ಷ ಕಾಡಯ್ಯ ಶಾಸ್ತ್ರೀ ಹಿರೇಮಠ ಹೇಳಿದರು.

ಪಟ್ಟಣದ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿರುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಬೇಡ-ಜಂಗಮ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಿ ಇತರ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡಬಾರದು ಎಂದು ಹೇಳಿರುವ ಮಾತು ನಮಗೆ ತೀವ್ರ ನೋವುಂಟು ಮಾಡಿದೆ ಎಂದರು.

ಅರ್ಚಕ ಬಸವರಾಜ ನಿಶಾನಿಮಠ ಮಾತನಾಡಿ, ಬೇಡ-ಜಂಗಮರು ಎಸ್‌ಸಿ ಸೇರ್ಪಡೆಗಾಗಿ ಹಲವು ದಶಕಗಳಿಂದ ಹೋರಾಡುತ್ತಿದ್ದಾರೆ. ನ್ಯಾಯಾಲಯದ ತೀರ್ಪು ನಮ್ಮ ಪರವಾಗಿವೆ. ಈಗ ಡಾ.ಎಚ್.ಎನ್.ನಾಗಮೋಹನದಾಸ ಏಕ ಸದಸ್ಯ ಆಯೋಗದ ಜಾತಿ ಸಮೀಕ್ಷೆಯಲ್ಲಿ ನಮ್ಮ ಸಮುದಾಯಕ್ಕೆ ಅವಕಾಶ ಕೂಡಿ ಬಂದಿದೆ. ಈಗ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿರುವುದನ್ನು ಖಂಡಿಸುತ್ತೇವೆ ಎಂದರು.

ವಾಗೇಶ ಸಾಲಿಮಠ, ದುಂಡಯ್ಯ ಹಿರೇಮಠ, ಸಂಜಯ ಹಿರೇಮಠ, ಸೀಮಾ ಹಿರೇಮಠ, ಕಮಲಾಕ್ಷಿ ಹಿರೇಮಠ, ಮಹಾಂತೇಶ ಚರಂತಿಮಠ, ಸಿದ್ದಲಿಂಗಯ್ಯ ಘಂಟಿಮಠ, ನಿತ್ಯಾನಂದ ನಿಶಾನಿಮಠ, ಮಹಾಂತೇಶ ಹಿರೇಮಠ, ಸೋಮು ಹಿರೇಮಠ, ಶ್ರೀಶೈಲ ಹಿರೇಮಠ, ಬಾಳಯ್ಯ ಹಿರೇಮಠ, ಮಹಾಂತೇಶ ಉಜ್ಜಯನಿಮಠ, ರಮೇಶ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net