ಖರೀದಿ ವಸ್ತುವಿನ ಗುಣಮಟ್ಟದ ತಿಳಿವಳಿಕೆ ಅಗತ್ಯ

CTD GRAHAKA--00
Published on

ಚಿತ್ರದುರ್ಗ: ಯಾವುದೇ ವಸ್ತು ಖರೀದಿಸುವ ಮುನ್ನ ಅದರ ಗುಣಮಟ್ಟ ಹಾಗೂ ಯೋಗ್ಯ ದರ ಅರಿಯುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ ಯಾಧೀಶ ರೋಣ್‌ವಾಸುದೇವ ಗ್ರಾಹಕರಿಗೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಸರಸ್ವತಿ ಹಾಗೂ ಎಸ್‌ಜೆಎಂ ಕಾನೂನು ಕಾಲೇಜು, ಜಿಲ್ಲಾ ವಕೀಲರ ಸಂಘ ಮತ್ತಿತರ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ‘ಗ್ರಾಹಕರ ನ್ಯಾಯಕ್ಕಾಗಿ ವರ್ಚುವಲ್ ವಿಚಾರಣೆಗಳು ಮತ್ತು ಡಿಜಿಟಲ್ ಹಾದಿ’ ಘೋಷವಾಕ್ಯದೊಂದಿಗೆ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಖರೀದಿ ವೇಳೆ ಮೋಸ ಹೋಗದಂತೆ ಗ್ರಾಹಕರು ಜಾಗೃತಿ ವಹಿಸಬೇಕು, ಕೊಂಡುಕೊಳ್ಳುವ ವಸ್ತು, ನಾವು ಕೊಟ್ಟಿರುವ ದರಕ್ಕೆ ಅನುಗುಣವಾಗಿ ಗುಣಮಟ್ಟದಿಂದ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಗ್ರಾಹಕರ ಕೆಲಸ. ಒಂದು ವೇಳೆ ತಮಗೆ ಅನ್ಯಾಯವಾಗಿದ್ದರೆ ಜಿಲ್ಲಾ, ರಾಜ್ಯ ಅಥವಾ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿ ನ್ಯಾಯ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ತಮಗಿರುವ ಹಕ್ಕುಗಳ ಕುರಿತು ಗ್ರಾಹಕರಿಗೆ ಜಾಗೃತಿ ಇರಬೇಕು ಎಂದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ನಿತ್ಯವೂ ಒಂದಲ್ಲ ಒಂದು ವಸ್ತು ಖರೀದಿ ಮಾಡುತ್ತಿರುತ್ತೇವೆ. ಪ್ರತಿ ವಸ್ತುವಿನ ಖರೀದಿ ಹಿಂದೆ ದುಡಿಮೆಯ ಶ್ರಮವಿರುತ್ತದೆ. ಹೀಗಾಗಿ ಯಾವುದೇ ವಸ್ತುವಿನ ಮೌಲ್ಯ ಹಾಗೂ ಗುಣಮಟ್ಟ ಅರಿಯುವುದು ಬಹಳ ಮು ಖ್ಯ ಎಂದರು.

ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ. ಮಧುಸೂಧನ್ ಮಾತನಾಡಿ, ಪ್ರತಿಯೊಬ್ಬರೂ ಗ್ರಾಹಕರೇ ಆಗಿದ್ದಾರೆ. ಯಾವುದೇ ವಸ್ತು, ಸೇವೆಯನ್ನು ಹಣಕೊಟ್ಟು ಪಡೆದಾಗ ಗ್ರಾಹಕರಾಗುತ್ತೇವೆ. ವಸ್ತುವಿಗೆ ಸೂಕ್ತ ಬೆಲೆ, ಸಮರ್ಪಕ ಸೇವೆ ದೊರೆತಾಗ ಗ್ರಾಹಕರು ತೃಪ್ತರಾಗುತ್ತಾರೆ ಎಂದರು.

ಪ್ರಸ್ತುತ ಸಾಂಪ್ರದಾಯಕ ವ್ಯಾಪಾರ ಪದ್ಧತಿಯಿಂದ ಆನ್‌ಲೈನ್ ವ್ಯವಸ್ಥೆಗೆ ಬಂದಿರುವುದರಿಂದ ಇನ್ನಷ್ಟು ಎಚ್ಚರಿಕೆ ವಹಿಸುವುದು ಅಗತ್ಯ. ಗ್ರಾಹಕರ ಹಕ್ಕು, ಜವಾಬ್ದಾರಿ ತಿಳಿಸುವುದು ಇಲಾಖೆ ಕರ್ತವ್ಯವಾಗಿದೆ ಎಂದರು.

ಉಪಪ್ರಧಾನ ಕಾನೂನು ನೆರವು ಅಭಿರಕ್ಷಕ ಎಂ. ಮೂರ್ತಿ ಗ್ರಾಹಕರ ಸಂರಕ್ಷಣಾ ಕಾಯ್ದೆ ವಿಷಯ ಕುರಿತು ಉಪನ್ಯಾಸ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಅನಿಲ್‌ಕುಮಾರ್, ಸರಸ್ವತಿ ಕಾನೂನು ಕಾಲೇಜು ಪ್ರಾಚಾರ್ಯ ಡಾ.ಎಂ.ಎಚ್. ಸುಧಾದೇವಿ, ಎಸ್‌ಜೆಎಂ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಎಸ್. ದಿನೇಶ್, ಕಾನೂನು ಮಾಪನಾಶಾಸ್ತ್ರ ಸಹಾಯಕ ನಿಯಂತ್ರಕ ವೆಂಕಟೇಶ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್ ಮತ್ತಿತರರು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net