ಖರೀದಿ ನೆಪದಲ್ಲಿ ಅಂಗಡಿಯಲ್ಲಿ ಕಳವು

24-08-HNPP 1
ಹೊಳೆನರಸೀಪುರ ಪಟ್ಟಣಕ್ಕೆ ಆಗಮಿಸಿರುವ ಅಪರಿಚಿತ ಮಹಿಳೆಯರು.
Published on

ಹೊಳೆನರಸೀಪುರ: ಪಟ್ಟಣಕ್ಕೆ ನಾಲ್ಕಾರು ಮಹಿಳೆಯರ ತಂಡಗಳು ಆಗಮಿಸಿದ್ದು, ಇವರು ಅಂಗಡಿಗಳಿಗೆ ತೆರಳಿ ಖರೀದಿ ನೆಪದಲ್ಲಿ ಹಣ ನೀಡುವಾಗಿ ಇಲ್ಲಸಲ್ಲದ ತಗಾದೆ ತೆಗೆದು ಮೋಸ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ವರ್ತಕರು ಮತ್ತು ಸಾರ್ವಜನಿಕರು ಎಚ್ಚರ ವಹಿಸುವಂತೆ ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಲ್ಕಾರು ತಂಡಗಳು ಪ್ರಮುಖ ಅಂಗಡಿಗಳಿಗೆ ತೆರಳಿ ವ್ಯಾಪಾರ ಕುದುರಿಸುವ ನೆಪದಲ್ಲಿ ಅಂಗಡಿ ಮಾಲೀಕರನ್ನು ಏಮಾರಿಸಿ ಅಂಗಡಿಯಲ್ಲಿ ಬೆಲೆಬಾಳುವ ಪದಾರ್ಥಗಳನ್ನು ಕಳವು ಮಾಡುತ್ತಿದ್ದಾರೆ. ಖರೀದಿ ಮಾಡಿದ ಪದಾರ್ಥಕ್ಕೆ ಹಣ ನೀಡುವಾಗ 500 ರೂ. ನೀಡಿ ಏಕಾಏಕಿ ಅಂಗಡಿ ಮಾಲೀಕರೊಂದಿಗೆ ತಗಾದೆ ತೆಗೆದು ಲಪಟಾಯಿಸುವ ತಂತ್ರ ಬಳಸುತ್ತಿದ್ದಾರೆ. ಹೀಗಾಗಿ ತಮ್ಮ ಅಂಗಡಿಗಳಿಗೆ ಹೊಸಬರು ವ್ಯಾಪಾರಕ್ಕೆ ಬಂದಲ್ಲಿ ಹೆಚ್ಚರದಿಂದ ವಹಿವಾಟು ನಡೆಸುವಂತೆ ನಗರಠಾಣೆ ಪೊಲೀಸರು ಸಲಹೆ ನೀಡಿದ್ದಾರೆ.

ಅಂಗಡಿಗಳಿಗೆ ಹೊಸಬರು ಬಂದು ತಗಾದೆ ತೆಗೆದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net