ಖರೀದಿ ಕೇಂದ್ರಕ್ಕೆ ಅಧಿಕಾರಿಗಳಿಂದ ಬೀಗ

oplus_2
ಹುಲಸೂರು ಸಮೀಪದ ಕೇಸರಜವಳಗಾ ಪಿಕೆಪಿಎಸ್‌ನ ತೊಗರಿ ಖರೀದಿಯಲ್ಲಿ ಅವ್ಯವಹಾರ ಮಾಡಿದ್ದನ್ನು ಗಮನಿಸಲು ಗುರುವಾರ ಜಿಲ್ಲಾ ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕ ಶಿವಾನಂದ ಕುಂಬಾರ ಮತ್ತು ಜಿಲ್ಲಾ ತೂಕ ಮತ್ತು ಅಳತೆ ಅಧಿಕಾರಿ ರಾಜಕುಮಾರ ಕೇಂದ್ರಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
Published on

ಹುಲಸೂರು: ಸಮೀಪದ ಭಾಲ್ಕಿ ತಾಲೂಕಿನ ಕೇಸರಜವಳಗಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಕೆಪಿಎಸ್)ದಲ್ಲಿ ಬೆಂಬಲ ಬೆಲೆಯಡಿ ತೊಗರಿ ಖರೀದಿಸುವ ತೂಕ ಯಂತ್ರದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ರೈತರು ಸಂಘಕ್ಕೆ ಬೀಗ ಹಾಕಲು ಮುಂದಾದಗಿರುವುದನ್ನು ಅರಿತು ಗುರುವಾರ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ತಪ್ಪು ಮಾಡಿರುವುದು ಕಂಡು ಬಂದಿದ್ದರಿಂದ ಖರೀದಿ ಕೇಂದ್ರಕ್ಕೆ ಬೀಗ ಹಾಕಿದರು.

ಜಿಲ್ಲಾ ತೂಕ ಮತ್ತು ಅಳತೆ ಅಧಿಕಾರಿ ರಾಜಕುಮಾರ ಖರೀದಿ ಕೇಂದ್ರದಲ್ಲಿರುವ ತೂಕ ಯಂತ್ರ ಪರಿಶೀಲಿಸಿ ವ್ಯತ್ಯಾಸ ಇರುವುದನ್ನು ಖಚಿತಪಡಿಸಿ ಮಾತನಾಡಿ, ಕೇಂದ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ ೨.೫೨೦ ಕೆಜಿ ತೊಗರಿ ಧಾನ್ಯ ಹೆಚ್ಚು ಪಡೆಯುತ್ತಿದ್ದಾರೆ ಎಂದು ಹೇಳಿದರು.

ತೂಕದಲ್ಲಿ ವ್ಯತ್ಯಾಸ ಆಗಿರುವುದನ್ನು ಅರಿತು ಜಿಲ್ಲಾ ಕೃಷಿ ಮಾರುಕಟ್ಟೆ ಸಮಿತಿ ಸಹಾಯಕ ನಿರ್ದೇಶಕ ಶಿವಾನಂದ ಕುಂಬಾರ ರೈತರಿಗೆ ತಿಳುವಳಿಕೆ ಹೇಳಿ ತಪ್ಪಿತಸ್ಥರ ವಿರುದ್ಧ ಆದಷ್ಟು ಬೇಗನೆ ಕ್ರಮಕೈಗೊಳ್ಳುತ್ತೇವೆ. ತಾವು ಮಾರಾಟ ಮಾಡಿರುವ ತೊಗರಿ ಧಾನ್ಯ ಹಾಗೂ ಲೆಕ್ಕ ಪರಿಶೋಧನೆ ಮಾಡಲಾಗುವುದು ಎಂದು ಸಮಾಧಾನಪಡಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವ್ಯವಸ್ಥಾಪಕ ಮಲ್ಲಿಕಾರ್ಜುನ, ಭಾಲ್ಕಿ ಎಪಿಎಂಸಿ ಕಾರ್ಯದರ್ಶಿ ರವಿ ಮೇತ್ರೆ, ಡಿಸಿಸಿ ಬ್ಯಾಂಕ್ ತಾಲೂಕು ಅಭಿವೃದ್ಧಿ ಅಧಿಕಾರಿ ಬಾಲಾಜಿ ಪಾಟೀಲ, ಗ್ರಾಪಂ ಸದಸ್ಯರಾದ ಚಂದ್ರಪ್ಪ ವಾಗೆ, ಮಹೇಶ ವಟಂಬೆ ಪಿಕೆಪಿಎಸ್ ಸಹಕಾರ ಸಂಘದ ಉಪಾಧ್ಯಕ್ಷ ಜನಾರ್ಧನ ಬಿರಾದಾರ, ನಿರ್ದೇಶಕರಾದ ಮಹೇಶ ವಿಶ್ವನಾಥ, ರಾಜಕುಮಾರ ಮಡಿವಾಳ, ನಾಮದೇವ ಮಾಚಾಪುರೆ , ಶ್ರೀಶೈಲ ಸಿದ್ದರಾಮಪ್ಪ, ರೈತ ಪ್ರಮುಖರಾದ ಸೋಮನಾಥ ಪಾಟೀಲ, ಮಹದೇವ ವಟಂಬೆ, ಕೈಲಾಸ್ ವಟಂಬೆ, ಬಸವರಾಜ ಖಂಡಾಳೆ, ರಾಜಪ್ಪ ಕಟ್ಟಾಳೆ, ಬಾಬುರಾವ ಪಂಚಾಳ,ಬಂಡೆವ್ವ ಹುಲಸೂರೆ ಇತರರಿದ್ದರು.

ಮೇಹಕರ್ ಠಾಣೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net