

ಕೊಳವಿ: ಗೋಕಾಕ ಕ್ಷೇತ್ರದ ಖನಗಾಂವ ಗ್ರಾಮದಲ್ಲಿ ಭಾನುವಾರ ಮೂರನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿಮಿತ್ತ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಈಚೆಗೆ ವಿಜಯೋತ್ಸವ ಜರುಗಿತು.
ಸುರೇಶ ಸನದಿ, ಮುಖಂಡರಾದ ಸಿದ್ದನಗೌಡ ಪಾಟೀಲ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖಂಡರಾದ ಸಿದ್ದಪ್ಪ ದೇಸಾಯಿ, ಶಂಕರ ಗುಡದನ್ನವರ, ಮುದುಕಪ್ಪ ಮಾಳಗಿ, ಕಾರ್ಯಕರ್ತ ರಾದ ಅಡಿವೆಪ್ಪ ಲಗಮೇಶಿ, ಬುಡ್ಡಾಸಾಬ್ ಅತ್ತಾರ್, ಸೋಮಯ್ಯ ವಿಭೂತಿಮಠ, ಸಂತೋಷ ಪಾಟೀಲ, ರಾಜು ತಡಸನೂರ ಇತರರಿದ್ದರು.