ಖಡ್ಗ ಕಲೆಯ ತರಬೇತಿ ಶಿಬಿರ

IMG-20210728-WA0026
Published on

ವಿಜಯಪುರ: ಕರ್ನಾಟಕ ಗಾಟ್ಕ ಸಂಸ್ಥೆ ವಿಜಯಪುರ ಇವರ ವತಿಯಿಂದ 2021 ಜುಲೈ 24, 25, 26 ರಂದು 3 ದಿನಗಳ ಕಾಲ ಗಾಟ್ಕ(ಖಡ್ಗಕಲೆ) ತರಬೇತಿ ಶಿಬಿರವನ್ನು ನಡೆಸಲಾಯಿತು. ವಿಜಯಪುರ ನಗರದ ಸಂಸ್ಕೃತಿ ಕಾಲೋನಿಯಲ್ಲಿ ಶಿಬಿರವನ್ನು ಆಯೋಜಿಸಿ ಮುಕ್ತಾಯ ಸಮಾರಂಭ ನಡೆಸಲಾಯಿತು. ಇದೆ ವೇಳೆ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಮಾಜಿ ಸೈನಿಕರಾದ ಶ್ರೀ ಸುಬೇದಾರ ಮರ್ಲಿಂಗಪ್ಪ, ಚನವೀರ ಹಾಗೂ CRPF ಸಾಹಾಯಕ ಉಪ ನಿರ್ದೇಶಕರಾದ ಶ್ರೀ ಸಾಯಿನಾಥ ಕಾಳೆ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಅಮಸಿದ್ದ ನಾಯ್ಕೋಡಿ, ಕರ್ನಾಟಕ ಘಟಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಬಾಗೆವಾಡಿ, ಕಾರ್ಯದರ್ಶಿ ಸುರೇಖಾ ಬಾಗಲಕೋಟ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಶೇಷವೆಂದರೆ ಈ ಬಾರಿ 9ನೇ ರಾಷ್ಟ್ರೀಯ ಘಟಕದಿಂದ ಗಾಟ್ಕ ಕಲೆಯ ಕ್ರೀಡಾಕೂಟ ಪಂಜಾಬ್ ನ ಫಿರೋಜಪುರ್ ನಲ್ಲಿ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಕರ್ನಾಟಕ ತಂಡ ಮೊದಲ ಬಾರಿಗೆ ಆಯ್ಕೆಯಾಗಿದ್ದು, ಈ ಬಾರಿ ಭಾಗವಹಿಸಲಿದೆ. ಸುಚಿತ್ರಾ ಇಂಡಿ. ರೇಣುಕಾ ಲೋಗಾವಿ. ವಿಭಾ ಕುಂಬಾರ, ಕರಿಷ್ಮಾ ಚಾವಿವಾಲಿ, ಕರ್ನಾಟಕದಿಂದ ಭಾಗವಹಿಸಲಿದ್ದಾರೆ ಎಂದು ತರಬೇತಿದಾರ ಬಸವರಾಜ್ ಬಾಗೇವಾಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net