

ಕೊಳ್ಳೇಗಾಲ : ವೈದ್ಯಕೀಯ ಶಿಕ್ಷಣ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಖಚಿತ ಧ್ಯೇಯ ಮತ್ತು ಗುರಿ ಇಟ್ಟುಕೊಂಡು ಮುನ್ನಡೆದರೆ ಸಾಧನೆ ಸುಲಭ ಎಂದು ಜನನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಂ.ಪ್ರವೀಣ್ ಕುಮಾರ್ ತಿಳಿಸಿದರು.
ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಅಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ನಕಾರಾತ್ಮಕ ಮಾತುಗಳಿಗೆ ಕಿವಿಗೊಡಬಾರದು. ಮಾಡುವ ಕೆಲಸದಲ್ಲಿ ಶ್ರಮ, ಶ್ರದ್ಧೆಯಿದ್ದರೆ ಸಾಧನೆ ಸುಲಭ. ಯಾರಲ್ಲೂ ಕೀಳರಿಮೆ ತೋರಬಾರದು. ಉತ್ತಮ ಕನಸುಗಳನ್ನು ಕಾಣುವ ಮೂಲಕ ಭವ್ಯ ಭಾರತದ ಪ್ರಜೆಗಳಾಗಬೇಕು. ಆಗ ಉನ್ನತ ಸ್ಥಾನ-ಮಾನಗಳು ಅರಸಿ ಬರುತ್ತವೆ ಎಂದರು.
ಕೀಳರಿಮೆ ಸಲ್ಲದು: ಈಗ ಸಾಮಾಜಿಕ ಮಾಧ್ಯಮಗಳು ಪ್ರಚಲಿತದಲ್ಲಿವೆ. ನಾವು ಕುಳಿತಲ್ಲೇ ಎಲ್ಲಾ ವಿಷಯಗಳನ್ನು ಕಲೆ ಹಾಕಬಹುದು. ಕೀಳರಿಮೆ ಇರಬಾರದು. ಆತ್ಮವಿಶ್ವಾಸದೊಂದಿಗೆ ನಮ್ಮನ್ನು ನಾವು ಗೌರವಿಸುವುದು ಅತಿಮುಖ್ಯ ಎಂದು ಡಾ.ಎಂ.ಪ್ರವೀಣ್ ಕುಮಾರ್ ವಿದ್ಯಾಥಿಗಳಿಗೆ ಕಿವಿ ಮಾತು ಹೇಳಿದರು.
ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಪ್ರಾಂಶುಪಾಲ ಡಿ.ಕೃಷ್ಣೇಗೌಡ, ಉಪನ್ಯಾಸಕಿ ಮಂಜುಳಾ ಇದ್ದರು.