

ಚಿಕ್ಕಮಗಳೂರು: ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿಗಧಿತ ದರಕ್ಕಿಂತ ಕಡಿಮೆ ದರ ಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಶ್ರೀರಾಮ ಮಂದಿರ ಆರ್ಯನಯ ನಜ ಕ್ಷತ್ರಿಯ ಸಂಘ ಮತ್ತು ಜಿಲ್ಲಾ ಸವಿತಾ ಸಮಾಜದ ಮುಖಂಡರು ಮಂಗಳವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ, ಪೂರ್ವಜರ ಕಾಲದಿಂದಲೂ ಕ್ಷೌರಿಕ ವೃತ್ತಿಯನ್ನು ಜೀವನದ ಭಾಗವಾಗಿ ಅವಲಂಭಿಸಿಕೊAಡಿz್ದೆÃವೆ. ಈ ವೃತ್ತಿ ಹೊರತಾಗಿ ಬೇರೆ ಯಾವುದೇ ಕೆಲಸವನ್ನು ತಿಳಿಯದ ಸಮಾಜ ಬಾಂಧವರಿಗೆ ಕೆಲವರು ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸವಿತಾ ಸಮಾಜದ ಬಾಂಧವರ ಒಳಿತಿಗಾಗಿ ವೃತ್ತಿಯ ದರಪಟ್ಟಿಯನ್ನು ಸ್ಥಾಪಿಸಿದ್ದು, ಕ್ಷೌರಿಕ ವೃತ್ತಿದಾರರು ಈ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಹೊರರಾಜ್ಯದಿಂದ ಕೆಲವರನ್ನು ಕರೆತಂದಿರುವ ಬಂಡವಾಳ ಶಾಹಿಗಳು ಕಡಿಮೆ ದರ ನಿಗಧಿಪಡಿಸಿ ಮೂಲ ವೃತ್ತಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷತ್ರಿಯ ಸಂಘದ ತಾಲೂಕು ಅಧ್ಯಕ್ಷ ಸಿ.ಎಂ.ಯೋಗೇಶ್ ಮಾತನಾಡಿ, ಕ್ಷೌರಿಕ ವೃತ್ತಿಯವರು ಸಮಾಜವು ನಿಗಧಿಪಡಿಸಿದ ದರದಲ್ಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರು ನಮ್ಮ ವೃತ್ತಿಯವರ ಹೊಟ್ಟೆಮೇಲೆ ಹೊಡೆದು ಕಡಿಮೆ ದರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ್ ಮಾತನಾಡಿ, ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಹೊರ ರಾಜ್ಯದ ಕ್ಷೌರಿಕ ಅಂಗಡಿಗಳು ಸ್ಥಳೀಯ ಮೂಲ ವೃತ್ತಿದಾರರಿಗೆ ಕುತ್ತು ತಂದಿದ್ದಾರೆ. ಸಮಾಜದ ದರವನ್ನು ಮನದಟ್ಟು ಮಾಡಿಕೊಳ್ಳದೇ ಮನಸ್ಸಿಗೆ ಬಂದAತೆ ದರ ನಿಗಧಿಪಡಿಸಿ ಪ್ರಚಾರಪಡಿಸುತ್ತಿರುವ ಕಾರಣ ಸವಿತಾ ಸಮಾಜದ ವೃತ್ತಿದಾರರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದರು.
ಪ್ರತಿಭಟನೆಗೂ ಮುನ್ನ ತಾಲೂಕು ಕಚೇರಿಯಿಂದ ಸವಿತಾ ಸಮಾಜದ ನೂರಾರು ಮುಖಂಡರು ತಮ್ಮ ಅಂಗಡಿ ಮುಂಗಟ್ಟು ಬಂದ್‌ಗೊಳಿಸಿ ಬಂಡವಾಳ ಶಾಹಿಗಳ ವಿರುದ್ಧ ಘೋಷಣೆ ಕೂಗುತ್ತಾ ಎಂಜಿ ರಸ್ತೆ ಮೂಲಕ ಆಜಾದ್ ಪಾಕ್ ವೃತ್ತದವರೆಗೆ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಕ್ಷತ್ರಿಯ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಶ್ರೀಧರ್, ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ಶೇಷಾದ್ರಿ, ಖಜಾಂಚಿ ಗಿರೀಶ್, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಜೆ.ಸತ್ಯನಾರಾಯಣ್, ಸಮಾಜದ ಮುಖಂಡರಾದ ಎನ್.ಸತೀಶ್, ಡಿ.ವೆಂಕಟೇಶ್, ಬಾಲಕೃಷ್ಣಪ್ಪ, ಅಶಕ್, ಲಕ್ಷಿö್ಮÃಕಾಂತ್, ವಿ.ಬಿ.ನಾರಾಯಣ್, ಧನರಾಜ್, ಚಂದ್ರಶೇಖರ್, ಬಸವರಾಜ್, ಗೋಗಿ ಮತ್ತಿತರರಿದ್ದರು.