ಕ್ಷೇತ್ರಪತಿ ಸಿನಿಮಾ ಆ. 18ಕ್ಕೆ ಬೆಳ್ಳಿ ತೆರೆಗೆ

28ctd33--08
Published on


ಚಿತ್ರದುರ್ಗ: ಉತ್ತರ ಕರ್ನಾಟಕ ರೈತ ಸಮುದಾಯದ ಹೋರಾಟ ಬದುಕು, ಆ ಭಾಗದ ಸೊಗಡನ್ನು ಆಧರಿಸಿ ಚಿತ್ರೀಕರಿಸಿರುವ ಕ್ಷೇತ್ರಪತಿ ಸಿನಿಮಾ ಆ.18ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕನಟ ನವೀನ್ ಶಂಕರ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಂದೆ-ಮಗನ ಕೃಷಿ ಬಾಂಧವ್ಯದ ಕಥೆ ಹೇಳುತ್ತಲೇ ವಿವಿಧ ತಿರುವು ಪಡೆಯುವ ಚಿತ್ರ ಇದಾಗಿದ್ದು, ಪ್ರೇಕ್ಷಕರನ್ನು ಹಿಡಿದಿಡುವ ವಿಶ್ವಾಸವಿದೆ. ಶ್ರೀಕಾಂತ್ ಕಟಗಿ ಉತ್ತಮ ನಿರ್ದೇಶನದೊಂದಿಗೆ ಹೊರಹೊಮ್ಮಿದೆ. ರವಿ ಬಸ್ರೂರು ಅವರ ಸಂಗೀತದಲ್ಲಿ ನಾಲ್ಕು ಹಾಡುಗಳಿವೆ ಎಂದರು.

ಸಿನಿಮಾದಲ್ಲಿ ಶೇ 90ರಷ್ಟು ಉತ್ತರ ಕರ್ನಾಟಕ ಭಾಗದವರೇ ಅಭಿನಯಿಸಿದ್ದಾರೆ. ಅಲ್ಲಿಯ ವಿವಿಧ ಸ್ಥಳಗಳಲ್ಲೇ ಹೆಚ್ಚು ಚಿತ್ರೀಕರಣ ಮಾಡಲಾಗಿದೆ. ನಟಿ ಅರ್ಚನಾ ಜೋಯಿಸ್ ಪತ್ರಕರ್ತೆ ಪಾತ್ರದಲ್ಲಿ ನಟಿಸಿದ್ದು, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು.

ಸಹ ಕಲಾವಿದರಾದ ಹರ್ಷ ಅರ್ಜುನ್, ರಾಹುಲ್ ಐನಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net