

ಸವದತ್ತಿ: ಸುಮಾರು 15 ವರ್ಷಗಳ ನಂತರ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ್ದು, ಗೆಲುವಿಗಾಗಿ ಪ್ರತ್ಯ ಹಾಗೂ ಪರೋವಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ 2ನೇ ಅವಧಿಗೆ ಅಧ್ಯ &ಉಪಾಧ್ಯರಾಗಿ ಅವಿರೋಧ ಆಯ್ಕೆ ಯಾದವರಿಗೆ ಶುಭಕೋರಿ ಮಾತನಾಡಿದರು. ೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದ್ದು, ಎಲ್ಲರ ಸಹಕಾರ ಮುಖ್ಯ. ಕಾಂಗ್ರೆಸ್ನ ಗೆಲುವು ಮುಂದುವರಿಯಲಿದೆ ಎಂದರು.
ಅಧ್ಯ ಸ್ಥಾನಕ್ಕೆ ಭುವನೇಶ್ವರಿ ಪಟ್ಟಣಶೆಟ್ಟಿ, ಉಪಾಧ್ಯ ಸ್ಥಾನಕ್ಕೆ ಶಿವಾನಂದ ಹೂಗಾರ ಸೂಚಕರಾಗಿದ್ದರು. ಒಟ್ಟು 27 ಸದಸ್ಯರು, ಸಂಸದರು ಮತ್ತು ಶಾಸಕರ ಪೈಕಿ 24 ಸದಸ್ಯರು ಹಾಜರಿದ್ದರು. ಬೇರೆ ನಾಮಪತ್ರ ಸಲ್ಲಿಕೆಯಾಗದ ಕಾರಣ ಅಧ್ಯರಾಗಿ ಚನ್ನವ್ವ ಗಿರೆಪ್ಪ ಹುಚ್ಚಣ್ಣವರ, ಉಪಾಧ್ಯೆಯಾಗಿ ದಾವಲಬಿ ಮಕ್ತ್ತುಂಸಾಬ್ ಸನದಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಗುಲಾಲ್ ಎರಚಿ ಸಂಭ್ರಮಾಚರಿಸಿದರು. ಚುನಾವಣಾಧಿ-ಕಾರಿಯಾಗಿ ಮಲ್ಲಿಕಾರ್ಜುನ ಹೆಗ್ಗಣ್ಣವರ ಕಾರ್ಯನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಅಶ್ವತ್ಥ ವೆದ್ಯ, ಚಂದ್ರು ಶ್ಯಾಮರಾಯನವರ, ಪ್ರಭು ಪ್ರಭುನವರ, ಬಸವರಾಜ ಪ್ರಭುನವರ, ರಾಜಶೇಖರ ಕಾರದಗಿ, ಮಲ್ಲಿಕಾರ್ಜುನ ಪುರದಗುಡಿ, ಮಹಾಬಳೇಶ್ವರ ಪುರದಗುಡಿ, ಮಂಜುನಾಥ ಪಾಚಂಗಿ, ದೀಪಕ ಜಾನ್ವೆಕರ, ಬಸವರಾಜ ಅರಮನಿ ಸೇರಿ ಪುರಸಭೆ ಸದಸ್ಯರು, ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಇದ್ದರು.