ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

3
Published on

ಗೋಕಾಕ: ಎಲ್ಲ ಸಮುದಾಯದವರ ಪ್ರೀತಿ ಹಾಗೂ ವಿಶ್ವಾಸವೇ ನನ್ನನ್ನು ಸಂಸದನನ್ನಾಗಿ ಮಾಡಿದೆ ಎಂದು ಸಂಸದ ಜಗದೀಶ ಶೆಟ್ಟರ್​ ಹೇಳಿದರು.
ನಗರದ ಬಿಎನ್​ ಮಟ್ಟಿಕಲ್ಲಿ ಕಲ್ಯಾಣ ಮಂಟಪದಲ್ಲಿ ಶಂಕರಲಿಂಗ ಸಂಸ್ಥೆ ಹಾಗೂ ಸಹ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಬೆಳಗಾವಿ ಲೋಕಸಭಾ ೇತ್ರವನ್ನು ಸರ್ವಾಂಗೀಣ ಅಭಿವದ್ಧಿಯೊಂದಿಗೆ ಕಾರ್ಯಪ್ರವತ್ತನಾಗಿದ್ದೇನೆ. ದಿ.ಸುರೇಶ ಅಂಗಡಿ ಪ್ರಾರಂಭಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಲಾಗುವುದು. ಗೋಕಾಕ ಶಾಸಕರ ಸಹಕಾರದೊಂದಿಗೆ ಪ್ರವಾಸೋದ್ಯಮ ಅಭಿವದ್ಧಿ ಪಡಿಸಲು ಕಾರ್ಯಪ್ರವತ್ತನಾಗಿದ್ದೇನೆ ಎಂದರು. ಸುರೇಶ ಚನ್ನಿ, ಅನಿಲ ಕವಿಶೆಟ್ಟಿ, ಜಿ.ಎಂ. ಅಂದಾನಿ, ಬಿ.ಎಂ. ಕುಬಸದ, ಶೀಲಾ ಬಿಳ್ಳೂರ, ಶಿವಲೀಲಾ ಆಲತಗಿ, ಡಾ.ಆರ್​.ಎಸ್​. ಗುಣಕಿ, ಬಿ.ಎಂ. ಹಿಂಡಿಹೊಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net