

ಸುರಪುರ: ಕ್ಷೇತ್ರದಲ್ಲಿ ವಿದ್ಯುತ್ ಸೇರಿ ಯಾವುದೇ ಸಮಸ್ಯೆ ಇದ್ದರೆ ತಕ್ಷಣ ನನ್ನ ಗಮನಕ್ಕೆ ತಂದರೆ ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕ ಭರವಸೆ ನೀಡಿದರು.
ತಾಲೂಕಿನ ದೇವತ್ಕಲ್(ಕೋನಾಳ) ಬಳಿ ನಿರ್ಮಿಸಿದ ೩೩/೧೧ ಕೆವಿ ವಿದ್ಯುತ್ ಉಪ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಉಪ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ. ಈ ಕೇಂದ್ರದಿAದ ದೇವತ್ಕಲ್ ಹಾಗೂ ಸುತ್ತಲಿನ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದರು. ತಂದೆಯವರ ಅಧಿಕಾರವಧಿಯಲ್ಲಿ ಶಿಕ್ಷಣ, ರಸ್ತೆ, ವಿದ್ಯುತ್‌ಗೆ ಹೆಚ್ಚಿನ ಒತ್ತು ನೀಡಿದ್ದರು. ನಾನು ಕೂಡ ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಶ್ರಮಿಸುವುದಾಗಿ ಹೇಳಿದರು.
ಕಲಬರಗಿ ವಲಯದ ಅಧೀಕ್ಷಕ ಅಭಿಯಂತ ಎಂ.ಎA.ಕಿತ್ತೂರ, ಕಲಬುರಗಿ ಅಧಿಕ್ಷಕ ಅಭಿಯಂತರ ಖಂಡಪ್ಪ ಸೋನೆವಾಣೆ ಮಾತನಾಡಿದರು. ಉಪ ಕೇಂದ್ರ ನಿರ್ಮಾಣಕ್ಕೆ ಜಾಗ ನೀಡಿದ ಭೂದಾನಿ ಶಾಂತಗೌಡ ಆರ್.ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ದೇವತ್ಕಲ್ ಗ್ರಾಪಂ ಅಧ್ಯಕ್ಷೆ ದೇವಕ್ಕೆಮ್ಮ, ಉಪಾಧ್ಯಕ್ಷ ತಿರುಪತಿಗೌಡ, ಸುರಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಮುಖಂಡರಾದ ವೆಂಕೋಬ ಯಾದವ್, ಅಬ್ದುಲ್ ಗಫಾರ್ ನಗನೂರಿ, ಮಲ್ಲಣ್ಣ ಸಾಹು ನರಸಿಂಗಪೇಟ, ಸೂಗೂರೇಶ ವಾರದ, ಭೀಮರಾಯ ಮೂಲಿಮನಿ, ಚಂದ್ರಶೇಖರ ದಂಡಿನ, ಅಂಬ್ರೇಶಗೌಡ ಸರ್ಜಾಪುರ, ತಾಪಂ ಇಒ ಬಸವರಾಜ ಸಜ್ಜನ್, ಜೆಸ್ಕಾಂನ ಯಾದಗಿರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎ.ಎಚ್.ಮಮ್ತಾಜ್ ಬೇಗಂ, ಸುರಪುರ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಬಿರಾಳ, ಉಪ ವಿಭಾಗದ ಎಇಇ ರಫಿಕ್ ಅಹ್ಮದ್, ಹುಣಸಗಿ ಎಇಇ ಕಳಕಪ್ಪ, ಎಇಇ ಅಂಬ್ರೇಶ ಸ್ವಾಗತಿಸಿದರು. ಶ್ರೀಶೈಲ ತಮದೊಡ್ಡಿ ವಂದಿಸಿದರು.