ಕ್ಷೇತ್ರದ ಪ್ರಗತಿಗೆ ಪ್ರಾಮಾಣಿಕ ಯತ್ನ

19M.D.R.6
Published on

ಮದ್ದೂರು: ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಕ್ಷೇತ್ರದ ಪ್ರಗತಿಗೆ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.


ತಾಲೂಕಿನ ಕುರುಬರದೊಡ್ಡಿ, ಬೆಳ್ತೂರು, ನಾಗನದೊಡ್ಡಿ, ಮುದಿಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 25 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನನ್ನ ಅಧಿಕಾರದ ಅವಧಿಯಲ್ಲಿ ಶಕ್ತಿ ಮೀರಿ ಸರ್ಕಾರದಿಂದ ವಿಶೇಷ ಅನುದಾನ ತಂದು ತಾಲೂಕಿನ ಸಮಗ್ರ ಅಭಿವೃದ್ಧಿಯನ್ನು ಮಾಡಿದ್ದೇನೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿದ್ದೇನೆ ಎಂದರು.


ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ, ಗ್ರಾಪಂ ಅಧ್ಯಕ್ಷ ರವಿಕುಮಾರ್, ಪ್ರದೀಪ್, ಸದಸ್ಯರಾದ ಗೂಳೇಶ್, ಶಂಕರ್, ರಾಧಾಕೃಷ್ಣ, ವಿಜಯ್‌ಕುಮಾರ್, ದಿವ್ಯಾ, ಎಸ್.ಎಂ.ಗೌಡ, ಬೋರಯ್ಯ, ಸಿದ್ದರಾಜು, ಪ್ರಸನ್ನ, ನಳಿನಿ, ತಾಯಮ್ಮ, ಅನಂತರಾಮು, ಗಿರೀಶ್, ಮುಖಂಡರಾದ ಇಂದುಕುಮಾರ್, ಸಂತೋಷ್, ರವಿಕುಮಾರ್, ಆನಂದ್, ಜಗದೀಶ್, ರವಿ, ಸೋಮೇಗೌಡ, ಕೃಷ್ಣ, ವಿರೂಪಾಕ್ಷೇಗೌಡ, ಮನುಕುಮಾರ್, ಬಾಲರಾಜು, ಗೋವಿಂದ, ಬಿ.ಸಿ.ವೆಂಕಟೇಶ್, ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net