ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವೆ

1KMD-1
ಸಬ್ಬನಹಳ್ಳಿಯ ಶ್ರೀ ಪಟ್ಟಲದಮ್ಮ ದೇವಾಲಯ ಆವರಣದಲ್ಲಿ ಸಮುದಾಯ ಭವನದ ಅಡುಗೆ ಮನೆ ನಿರ್ಮಾಣಕ್ಕೆ ಕದಲೂರು ಉದಯ್ ಭೂಮಿಪೂಜೆ ನೇರವೆರಿಸಿದರು.
Published on

ಕೆ.ಎಂದೊಡ್ಡಿ: ಮದ್ದೂರು ಕ್ಷೇತ್ರದ ಜನರ ಆಶೋತ್ತರಗಳಿಗೆ ನನ್ನ ಉಸಿರಿರುವ ತನಕ ಸ್ಪಂದಿಸುತ್ತೇನೆ ಎಂದು ಕದಲೂರು ಉದಯ್ ಚಾರಿಟ್ರಬಲ್ ಟ್ರಸ್ಟ್ ಅಧ್ಯಕ್ಷ ಕದಲೂರು ಉದಯ್ ತಿಳಿಸಿದರು.


ಸಮೀಪದ ಸಬ್ಬನಹಳ್ಳಿಯ ಶ್ರೀ ಪಟ್ಟಲದಮ್ಮ ದೇವಾಲಯ ಆವರಣದಲ್ಲಿ ಸಮುದಾಯ ಭವನದ ಅಡುಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿ, ಗ್ರಾಮದ ಜನರು ಅಡುಗೆ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಆ ಮನವಿ ಮೇರೆಗೆ ಟ್ರಸ್ಟ್ ವತಿಯಿಂದ ಶೀಘ್ರ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.


ನನಗೆ ದೇವರ ಮೇಲೆ ಅಪಾರ ನಂಬಿಕೆ ಇರುವುದರಿಂದ ಕ್ಷೇತ್ರದ ಜನರ ಒಳಿತಿಗಾಗಿ ನಿರ್ಮಾಣ ಹಂತದಲ್ಲಿರುವ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧನಸಹಾಯ ಮಾಡುತ್ತಾ ಬಂದಿದ್ದೇನೆ. ಕ್ಷೇತ್ರದ ಜನರ ಆಸೆಯಂತೆ ಧಾರ್ಮಿಕ ಕ್ಷೇತ್ರಕ್ಕೆ ತೆರಳಲು 500ಕ್ಕೂ ಹೆಚ್ಚು ಬಸ್‌ಗಳಲ್ಲಿ ಸುಮಾರು 40,000 ಜನರನ್ನು ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ದರ್ಶನಕ್ಕೆ ಈಗಾಗಲೇ ಕಳುಹಿಸಿದ್ದೇನೆ. ಯಾತ್ರೆಗೆ ಹೋಗ ಬಯಸುವ ಕ್ಷೇತ್ರದ ಜನರಿಗೆ ಇಂದಿಗೂ ಬಸ್ ವ್ಯವಸ್ಥೆ ಮಾಡುತ್ತಿದ್ದೇನೆ ಎಂದರು.

ಗ್ರಾಪಂ ಸದಸ್ಯ ಕದಲೂರು ತಿಮ್ಮೇಗೌಡ, ಮಂಚೇಗೌಡ, ಪುಟ್ಟೇಗೌಡ, ಹೊನ್ನೇಗೌಡ, ರಾಜಣ್ಣ, ಮಾಯಲಿಂಗೇಗೌಡ, ಶಿವಲಿಂಗೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net