ಕ್ಷೇತ್ರದ ಜನತೆಗೆ ಉತ್ತಮ ಆರೋಗ್ಯ ಸೇವೆ

SRINGER
ಶೃಂಗೇರಿ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೂತನ ಐಪಿಡಿ ಬ್ಲಾಕ್ ಅನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಉದ್ಘಾಟಿಸಿದರು.
Published on

ಶೃಂಗೇರಿ: ಕ್ಷೇತ್ರದ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಲಾಗಿದೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.

ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭಾನುವಾರ ನೂತನ ಐಪಿಡಿ ಬ್ಲಾಕ್ ಉದ್ಘಾಟಿಸಿ ಮಾತನಾಡಿ, ಆಸ್ಪತ್ರೆ ಮರು ನಿರ್ಮಾಣದ ನಂತರ ಈಗಾಗಲೇ ಅನೇಕ ಸುಧಾರಣೆ ತರಲಾಗಿದೆ. ತಜ್ಞ ವೈದ್ಯರು, ಒಳ ರೋಗಿಗಳ ವಿಭಾಗ, ಶಸ ಚಿಕಿತ್ಸಾ ಕೊಠಡಿ, ಸೇರಿದಂತೆ ಎಲ್ಲ ವಿಭಾಗದ ಸುಧಾರಣೆ ಮಾಡಲಾಗಿದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಸಾರ್ವಜನಿಕರಿಗೆ ಸೇವೆ ದೊರಕಲಿದೆ. ನಮ್ಮ ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ಆಶಯದಂತೆ ಅವರ ಗುರುಗಳ ಹೆಸರಿನಲ್ಲಿ ಆಸ್ಪತ್ರೆ ಇನ್ನಷ್ಟು ಉತ್ತಮ ಸೇವೆ ನೀಡಲಿದೆ ಎಂದರು.

ಶ್ರೀಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ, ಆಸ್ಪತ್ರೆ ಆಡಳಿತ ವಿಭಾಗದ ಡಾ. ಲಕ್ಷ್ಮೀ ರಾಘವನ್, ಡಾ. ಪ್ರಣವ್, ಡಾ. ಶುಭಲಕ್ಷ್ಮೀ ಡಾ. ಪೂಜಾ ಭಟ್, ಡಾ. ಲಕ್ಷ್ಮೀನಾರಾಯಣ್, ರಂಗನಾಥ್, ಡಾ. ಸುಹಾಸ್, ಜಗದ್ಗುರುಗಳ ಆಪ್ತ ಸಹಾಯಕ ಶಮಂತ ಶರ್ಮ ಇತರರಿದ್ದರು.

ಜಗದ್ಗುರುಗಳ ವಿಜಯಯಾತ್ರೆ ಆರಂಭ: ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳ 70 ದಿನದ ವಿಜಯಯಾತ್ರೆ ಭಾನುವಾರ ಆರಂಭಗೊಂಡಿತು. ಕರ್ನಾಟಕ, ತೆಲಂಗಾಣ, ದೆಹಲಿ ಮತ್ತು ನೇಪಾಳಕ್ಕೆ ಭೇಟಿ ನೀಡಲಿರುವ ಶ್ರೀಗಳು ಡಿ.3ರಂದು ಶೃಂಗೇರಿಗೆ ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net