

ಚೇಳೂರು : ಜನತೆಯ ಋಣ ನನ್ನ ಮೇಲಿದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದೇ ನನ್ನ ಮುಖ್ಯಗುರಿಯಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಬಾಗೇಪಲ್ಲಿ ತಾಲೂಕು ಚೇಳೂರು ಹೋಬಳಿ ಚಾಕವೇಲು, ಪುಲಗಲ್ಲು, ಚೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಹಾಗೂ 24 ಲಕ್ಷ ರೂ. ವೆಚ್ಚದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಚೇಳೂರು ಹೋಬಳಿ ಸುತ್ತಮುತ್ತ ಗ್ರಾಮಗಳಲ್ಲಿ ರಸ್ತೆಯು ಹದಗೆಟ್ಟಿದ್ದು, ರೈತರು ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಕೊಂಡ್ಯೂಯಬೇಕಾದರೆ ಹರಸಹಾಸ ಪಡಬೇಕಾಗಿದೆ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಕ್ಷೇತ್ರದ ಜನರು ಜನತಾ ದರ್ಶನದಲ್ಲಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಆದ್ದರಿಂದ ಎಲ್ಲ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಚಾಕವೇಲು ಗ್ರಾಪಂ ವೆಂಕಟರೆಡ್ಡಿಪಲ್ಲಿ ತಾಂಡ, ವಡ್ಡಿವಾಂಡ್ಲಪಲ್ಲಿ, ಯಗವಪ್ಯಾಯವಾಂಡ್ಲಪಲ್ಲಿ, ಪುಲಗಲ್ಲು ಗ್ರಾಪಂ ಮ್ಯಾಕಲಪಲ್ಲಿ, ಚೇಳೂರು ಗ್ರಾಪಂ ಶೇರ್‌ಖಾನ್ ಕೋಟೆ, ಗೆರಿಗಿರೆಡ್ಡಿಪಾಳ್ಯದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆಗೆ ಗುದ್ದಲ್ಲಿಪೂಜೆ, ನಿಮ್ಮಕಾಯಲಪಲ್ಲಿ, ವೆಂಕಟರೆಡ್ಡಿಪಲ್ಲಿ ತಾಂಡಕ್ಕೆ 24 ಲಕ್ಷ ರೂ.ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು.
ತಾಪಂ ಸದಸ್ಯ ಕೆ.ಆರ್.ಸುಧಾಕರ್ ರೆಡ್ಡಿ, ಮಾಜಿ ಸದಸ್ಯ ಪಿ.ವಿ.ರಾಮಾಂಜನೇಯರೆಡ್ಡಿ,ಮಾಜಿ ಅಧ್ಯಕ್ಷ ಕೆ.ಎಂ.ಚಿನ್ನಾರಾಮರೆಡ್ಡಿ, ಕೆಡಿಪಿ ಸದಸ್ಯರಾದ ಅಮರನಾಥರೆಡ್ಡಿ, ಲಾಯರ್ ನರಸಿಂಹಾರೆಡ್ಡಿ, ಪಿ.ಎಲ್.ಭಾನುಪ್ರಕಾಶ್, ಜಿ.ಶಿವಶಂಕರರೆಡ್ಡಿ, ಚೇಳೂರು ಗ್ರಾಪಂ ಸದಸ್ಯರಾದ ಎನ್.ಶ್ರೀನಿವಾಸರೆಡ್ಡಿ, ಸಹದೇವರೆಡ್ಡಿ, ವೆಂಕಟೇಶ್, ಗುತ್ತಿಗೆದಾರರಾದ ಶೇಖರ್ ರೆಡ್ಡಿ, ಕೆ.ಜಿ.ವೆಂಕಟರಮಣ, ಅಶ್ವತ್ಥರೆಡ್ಡಿ, ಮ್ಯಾಕಲಪಲ್ಲಿ ಸುರೇಶ್ ಮತ್ತಿತರರಿದ್ದರು.