ಕ್ಷೇತ್ರದ ಅಭಿವೃದ್ಧಿಯೇ ಗುರಿ

ckm mla
ಪಿಳ್ಳೇನಹಳ್ಳಿ-ಹುಲಿಕೆರೆ ಸೇತುವೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ರಮೇಶ್, ಲೋಕೇಶ್, ರವಿ, ಕಲ್ಮರುಡಪ್ಪ, ಗವಿರಂಗಪ್ಪ ಇತರರಿದ್ದರು.
Published on

ಚಿಕ್ಕಮಗಳೂರು: ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ಮೂಲಕ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಜನರ ಋಣ ತೀರಿಸುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಪಿಳ್ಳೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡ ಪಿಳ್ಳೇನಹಳ್ಳಿ-ಹುಲಿಕೆರೆ ಮಾರ್ಗದ ಸೇತುವೆ ಉದ್ಘಾಟಿಸಿ ಮಾತನಾಡಿ, ರಾಜಕಾರಣ ಮತ್ತು ಅಭಿವೃದ್ಧಿ ಬೇರೆ. ಅಭಿವೃದ್ಧಿ ವಿಷಯದಲ್ಲಿ ಎಂದೆಂದೂ ರಾಜಕಾರಣ ಮಾಡುವುದಿಲ್ಲ ಎಂದರು.
ಪಿಳ್ಳೇನಹಳ್ಳಿ-ಹುಲಿಕೆರೆ ಸೇತುವೆ ಕಾಮಗಾರಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿತ್ತು. ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗಿದೆ. ಕ್ಷೇತ್ರದ ಜನರ ಪ್ರೀತಿಯ ಮನ್ನಣೆಗೆ ಪಾತ್ರರಾಗಿ ಮೂರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಗೊಂಡ ಡಿ.ಸಿ.ಶ್ರೀಕಂಠಪ್ಪ ನನಗೆ ಮಾದರಿಯಾಗಿದ್ದು, ಅವರಂತೆಯೇ ರಾಜಕಾರಣದಲ್ಲಿ ಬದುಕುತ್ತೇನೆ ಎಂದರು.
ಗ್ರಾಪಂ ಅಧ್ಯಕ್ಷ ರಮೇಶ್, ಎಪಿಎಂಸಿ ಮಾಜಿ ಸದಸ್ಯ ಲೊಕೇಶ್, ಗ್ರಾಮದ ಮುಖಂಡರಾದ ರವಿ, ಕಲ್ಮರುಡಪ್ಪ, ಪಿಡಬ್ಲುೃಡಿ ಎಇಇ ಗವಿರಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net