

ರಾಮದುರ್ಗ: ತಾಲೂಕಿನ ವಿವಿಧ ರಸ್ತೆಗಳು ಹದಗೆಟ್ಟಿದ್ದು, ಹಂತ ಹಂತವಾಗಿ ರಸ್ತೆ ಸುಧಾರಣೆಗೆ ರಾಜ್ಯ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ, ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಅಶೋಕ ಪಟ್ಟಣ ಭರವಸೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ೭೫ ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ೩.೫೦ ಲಕ್ಷ ರೂ. ವೆಚ್ಚದಲ್ಲಿ ಹಲಗತ್ತಿಯಿಂದ ಮೂಲಂಗಿ-ಹಿರೇತಡಸಿ ಗ್ರಾಮಕ್ಕೆ ಸಂಪರ್ಕ ರಸ್ತೆ, ೧ ಕೋಟಿ ರೂ. ವೆಚ್ಚದಲ್ಲಿ ಹುಲಕುಂದ, ಸಾಲಹಳ್ಳಿ, ಬನ್ನೂರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರಕಾಶ ಹೊಳೆಪ್ಪಗೋಳ, ಎಪಿಎಂಸಿ ವಿಭಾಗದ ಎಇಇ ರಾಘವೇಂದ್ರ ಕೊರ್ತಿ, ಕಾರ್ಯದರ್ಶಿ ಶಿವಾನಂದ ಮಠ, ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ, ಶಿವಯೋಗಿ ಚಿಕ್ಕೋಡಿ, ಬಸವರಾಜ ಗಂಗಣ್ಣವರ, ನವೀನ ಗದಗ, ಈರಯ್ಯ ಹಿರೇಮಠ ಇತರರಿದ್ದರು.