ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ

22Rayabag2
Published on

ರಾಯಬಾಗ: ಕ್ಷೇತ್ರದ ಎಲ್ಲ ಪ್ರಮುಖ ರಸ್ತೆಗಳನ್ನು ಸುಧಾರಿಸುವುದರಿಂದ ರೈತರು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ನಿಪನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ೧.೫೦ ಕೋಟಿ ರೂ. ವೆಚ್ಚದಲ್ಲಿ ನಿಪನಾಳ-ಕಟಕಬಾವಿ, ಮಂಟೂರ ಗ್ರಾಮದಲ್ಲಿ ೧.೫೦ ಕೋಟಿ ರೂ. ವೆಚ್ಚದ ಅರಬಾವಿ-ಮಂಟೂರ-ದಂಡಾಪುರ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿಗೊಳಿಸಲು ಅಧಿವೇಶನದಲ್ಲಿ ಸಚಿವರ ಗಮನ ಸೆಳೆದು ಒತ್ತಡ ಹಾಕಲಾಗಿದೆ. ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡದಿರುವುದರಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಇಇ ಆರ್.ಬಿ.ಮನವಡ್ಡರ, ಎಇ ಶ್ರೀಧರ ಮೇಗಳಮನಿ, ಸದಾಶಿವ ಘೋರ್ಪಡೆ, ನಿಂಗಪ್ಪ ಪಕಾಂಡಿ, ಅಪ್ಪಾಸಾಹೇಬ ಬ್ಯಾಕೂಡ, ತುಕಾರಾಮ ಪೂಜಾರಿ, ರಾಜು ಹಳಬರ, ರಾವಸಾಹೇಬ ದೇಸಾಯಿ, ಸಂಜು ಕುರಣೆ, ಗೋವಿಂದ ದೇಸಾಯಿ, ದುಂಡಪ್ಪ ಪಾಟೀಲ, ರೇವಪ್ಪ ಮುಗಳಿ, ಸದಾನಂದ ಪಾಟೀಲ, ಬಸಲಿಂಗ ಕಾಡೇಶಗೊಳ, ಬಾಳಪ್ಪ ಕುರಬೆಟ್ಟ, ಶಂಕರ ಕುರಬೆಟ್ಟ, ಶಿವಾಜಿ ಜಟದಾರ, ಸತ್ಯಪ್ಪ ನಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net