

ಚಿತ್ರದುರ್ಗ: ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ತಾಲೂಕು ಹಳವುದರ ಗ್ರಾಮದಲ್ಲಿ ನೂತನ ಉಪ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಐದೂವರೆ ಕೋಟಿ ರೂ.ವೆಚ್ಚದಲ್ಲಿ ವೈದ್ಯರ ವಸತಿಗೃಹ ಕಟ್ಟಿಸಲಾಗುವುದು. ವಾಣಿವಿಲಾಸ ಸಾಗರದಿಂದ ಈ ಊರಿಗೂ ಶುದ್ದ ಕುಡಿಯುವ ನೀರು ಪೂರೈಸಲಾಗುವುದು. ಒಂದೊಂದು ಊರಿಗೆ ಐದಾರು ಶಾಲೆಗಳನ್ನು ಕಟ್ಟಿಸಿದ್ದೇನೆ. ಸರ್ಕಾರಿ ಶಾಲೆಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕೆ ಸ್ವಂತ ಖರ್ಚಿನಲ್ಲಿ ಬಸ್‌ಗಳನ್ನು ಒದಗಿಸಿದ್ದೇನೆ. ಚಾಲಕ, ಕಂಡಕ್ಟರ್‌ಗೂ ಸಂಬಳ ಕೊಡುತ್ತಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತಹ ಸಾರ್ಥಕ ಕೆಲಸ ಮಾಡಿಲ್ಲ. ದೇವಸ್ಥಾನ ಕಟ್ಟಿಸಿದ್ದೇನೆ, ಗುಣಮಟ್ಟದ ರಸ್ತೆ ನಿರ್ಮಾಣವಾಗಿವೆ. ಕೆರೆ ಕಟ್ಟೆಗಳ ದುರಸ್ಥಿಯಾಗಿವೆ ಎಂದರು.
ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಟಿಎಚ್‌ಒ ಡಾ.ಬಿ.ವಿ. ಗಿರೀಶ್, ತಿಪ್ಪೇಸ್ವಾಮಿ, ನವೀನ್, ಸಿದ್ದಣ್ಣ, ಲಿಂಗರಾಜ್, ಸಿದ್ದಣ್ಣ ಮತ್ತಿತರರು ಇದ್ದರು.