

ಬಸವಕಲ್ಯಾಣ: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಶರಣು ಸಲಗರ ಹೇಳಿದರು.
ಆಲಗೂಡ ಗ್ರಾಮದಲ್ಲಿ ೪.೯೫ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಚಿಟ್ಟಾ ಕ್ರಾಸ್‌ನಿಂದ ಆಲಗೂಡ ಗ್ರಾಮದ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದಲ್ಲಿ ಹಿಂದೆ ಎರಡು ವರ್ಷ ಮಾಡಿದ ಕೆಲಸ ನೋಡಿ, ಪುನಃ ಐದು ವರ್ಷದ ಅವಧಿಗೆ ಆಶೀರ್ವದಿಸಿದ್ದೀರಿ. ನಿಮ್ಮ ಸಮಸ್ಯೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಎಸ್‌ಎಸ್‌ಡಿಪಿ ಅಡಿ ಆಲಗೂಡ ಗ್ರಾಮದಿಂದ ಭೋಸಗಾದವರೆಗೆ ೧೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಕೆಲ ದಿನಗಳಲ್ಲಿ ಚಾಲನೆ ನೀಡಲಾಗುವುದು. ಭೋಸಗಾದಿಂದ ಸರಜೋಳಗಾ ಕ್ರಾಸ್‌ವರೆಗೆ ಕೆಕೆಆರ್‌ಡಿಬಿ (ಮೈಕ್ರೋ) ಯೋಜನೆಯಡಿ ೩.೭೫ ಕೋಟಿ ರೂ. ಅನುದಾನದಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದರು.
ಆಲಗೂಡದಲ್ಲಿ ಮಾರ್ಚ್, ಏಪ್ರಿಲ್‌ನಲ್ಲಿ ಹಮ್ಮಿಕೊಂಡ ನಾಥ ಉತ್ಸವ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ. ಅಭಿವೃದ್ಧಿಗೆ ಆದ್ಯತೆ ನೀಡೋಣ. ರಾಜಕೀಯದಲ್ಲಿ ಕೆಲವು ಸಲ ಸುಳ್ಳು ಹೇಳುವುದು ಅನಿವಾರ್ಯ. ಆದರೆ ನಾನು ವೈಯಕ್ತಿಕವಾಗಿ, ಸ್ವಾರ್ಥಕ್ಕಾಗಿ ಯಾವತ್ತು ಸುಳ್ಳು ಹೇಳಲಾರೆ ಎಂದರು.
ಎಇಇ ಧನರಾಜ ಚವ್ಹಾಣ್, ಎಇ ವಿಜಯಕುಮಾರ ಗಡವಂತೆ, ಗುತ್ತಿಗೆದಾರ ಗೋಪಾಲಯ್ಯ ವಿಜಯಪುರಕರ್, ಮಾಧವರಾವ ಹಸೂರೆ, ಶ್ರೀಕಾಂತ ಪಾಟೀಲ್, ಮಹಾದೇವ ಮುದಗಲೆ, ಶಿವರಾಜ ತಾಟೆ, ರಾಜು ಜಾನವಲೆ, ವೆಂಕಟ ಖನಕೂರೆ, ಅನೀಲ ಪಾಟೀಲ್, ಜ್ಞಾನದೇವ ಜಾಧವ್, ತಾನಾಜಿ ಸೋಮವಂಶಿ, ರಾಜು ವಾಡೇಕರ್, ತುಕರಾಮ ಪಾಟೀಲ್, ಅರವಿಂದ ವಾಡೇಕರ್, ಮೋಹನ ಉಕ್ಕವಲ್ಲೆ, ಮಲ್ಲನಗೌಡ, ಕೃಷ್ಣ ಇತರರಿದ್ದರು.