

ಚಾಮರಾಜನಗರ: ಜನರು ನೀಡಿದ ಅಧಿಕಾರವನ್ನು ಅವರ ಸೇವೆಗೆ ಮೀಸಲಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದು ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ತಿಳಿಸಿದರು.
ತಾಲೂಕಿನ ಕುಲಗಾಣ-ಹಿರೀಬೇಗೂರು ರಸ್ತೆಗೆ 1.50 ಕೋಟಿ ರೂ. ಹಾಗೂ ಹಿರಿಬೇಗೂರು- ಚಿಕ್ಕಬೇಗೂರು ರಸೆಗ್ತೆ 1.50 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಡಾಂಬರೀಕರಣಗೊಳಿಸುವ ಕಾಮಗಾರಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಹರವೆ ಹೋಬಳಿಯ ಆರು ಪಂಚಾಯಿತಿಗಳು ಸೇರ್ಪಡೆಯಾದ ಬಳಿಕ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದೇವೆ. ನಾನು ಶಾಸಕನಾದ ನಂತರ ಹರವೆ ಭಾಗಕ್ಕೆ ವಿಶೇಷ ಅದ್ಯತೆಯನ್ನು ನೀಡಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮವಹಿಸಿದ್ದೇನೆ ಎಂದರು.
ಕಳೆದ 30 ವರ್ಷಗಳಿಂದ ಈ ಭಾಗದ ರಸ್ತೆಗಳು ಅಭಿವೃದ್ಧಿಯಾಗಿರಲಿಲ್ಲ. ಚಿಕ್ಕಬೇಗೂರು ಹಾಗೂ ಹಿರಿಬೇಗೂರು ಗ್ರಾಮಸ್ಥರು ರಸ್ತೆ ಅಭಿವೃದ್ಧಿಪಡಿಸಬೇಕೆಂದು ಹಲವಾರು ಭಾರಿ ಮನವಿ ಮಾಡಿದ್ದರು. ಈ ರಸ್ತೆಗಳ ದುಸ್ಥಿತಿಯನ್ನು ಗಮನಿಸಿ, ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿ, ಕಾಮಗಾರಿಯನ್ನು ತಕ್ಷಣದಿಂದಲೇ ಆರಂಭಿಸಬೇಕೆಂದು ಸೂಚನೆಯನ್ನು ನೀಡಿದ್ದೇನೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.
ಮೂನ್ನೂರು ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ರಸ್ತೆ, ಚರಂಡಿ, ಸಮುದಾಯ ಭವನಗಳು, ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರಗಳ ನಿರ್ಮಾಣ, ಶಿಥಿಲಗೊಂಡಿದ್ದ ಶಾಲೆ, ಅಂಗನವಾಡಿಗಳ ದುರಸ್ತಿ, ಎಲ್ಲ ವರ್ಗದವರು ವಾಸಿಸುವ ಬೀದಿಗಳಿಗೂ ಸಿಮೆಂಟ್ ರಸ್ತೆ, ಸಿಸಿ ಚರಂಡಿ ನಿರ್ಮಾಣ ಸೇರಿದಂತೆ ತಮ್ಮ ಮನವಿಗಳಿಗೆ ಸಕಾರಾತ್ಮಾಕವಾಗಿ ಸ್ಪಂದಿಸಿದ್ದೇನೆ. ಈ ಎರಡು ರಸ್ತೆಗಳ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಿಸಿಕೊಳ್ಳುವ ಜತೆಗೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಹಕಾರ ನೀಡಬೇಕು ಎಂದರು.
ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಹರವೆ ಮಹೇಶ್, ಕುಲಗಾಣ ಗ್ರಾಪಂ ಅಧ್ಯಕ್ಷೆ ಪ್ರಮೀಳಾ, ಉಪಾಧ್ಯಕ್ಷೆ ಸವಿತಾ ಮಹದೇವವಸ್ವಾಮಿ, ಸದಸ್ಯರಾದ ದೊರೆಸ್ವಾಮಿ, ಮಹದೇವಮ್ಮ, ಹಿರಿಬೇಗೂರು ಪ್ರಕಾಶ, ತಾ.ಪಂ. ಮಾಜಿ ಸದಸ್ಯ ಕೆಬ್ಬೇಪುರ ನಂದೀಶ್, ಗುಂಡ್ಲುಪೇಟೆ ಎಪಿಎಂಸಿ ಅಧ್ಯಕ್ಷ ರವಿ, ಗುತ್ತಿಗೆದಾರ ಎ.ಎನ್.ರವಿ, ಮುಖಂಡರಾದ ಮಲೆಯೂರು ಸುನೀಲ್, ಕೆರೆಹಳ್ಳಿ ವೆಂಕಟೇಶ್, ಮಲ್ಲಿಕಾರ್ಜುನಸ್ವಾಮಿ, ಕಣ್ಣೇಗಾಲಸ್ವಾಮಿ, ಎಚ್.ವಿ.ಪ್ರಭುಸ್ವಾಮಿ, ರಾಜಣ್ಣ, ದೊರೆಸ್ವಾಮಿ, ಚೈತ್ರಾ ಸೋಮು, ಕಾವುದವಾಡಿ ಗುರು ಇತರರು ಇದ್ದರು.