ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು

1508 Chincholi 01A
ಚಿಂಚೋಳಿಯಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಧ್ವಜಾರೋಹಣ ನೆರವೇರಿಸಿದರು. ಶಾಸಕ ಡಾ. ಅವಿನಾಶ ಜಾಧವ್, ಡಿವೈಎಸ್‌ಪಿ ಕೆ.ಬಸವರಾಜ, ಸಿಪಿಐ ಅಂಬಾರಾಯ ಕಾಮನಮನಿ ಇತರರಿದ್ದರು.
Published on

ಚಿಂಚೋಳಿ: ಕೋಟ್ಯಂತರ ಜನರ ಬಲಿದಾನದಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅವರೆಲ್ಲರನ್ನು ಸದಾ ಸ್ಮರಿಸಬೇಕು ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.

ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೭೭ನೇ ಸ್ವಾತಂತ್ರ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಬ್ ಕಾ ಸಾಥ್- ಸಬ್‌ಕಾ ವಿಕಾಸ್ ಎಂಬ ತತ್ವದೊಂದಿಗೆ ಆಡಳಿತ ನಡೆಸುತ್ತಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ನಾವು ನುಡಿದಂತೆ ನಡೆದಿದ್ದೇವೆ. ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿದ್ದು, ಹಂತ ಹಂತವಾಗಿ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದರು.

ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಧ್ವಜಾರೋಹಣ ನೆರವೇರಿಸಿದರು. ಪಿಎಸ್‌ಐ ಹಣಮಂತಪ್ಪ ಬಂಕಲಗಿ ನೇತೃತ್ವದಲ್ಲಿ ಪಥ ಸಂಚಲನ ಜರುಗಿತು.

ಡಿವೈಎಸ್‌ಪಿ ಕೆ.ಬಸವರಾಜ, ಸಿಪಿಐ ಅಂಬರಾಯ ಕಾಮನಮನಿ, ಪುರಸಭೆ ಮುಖ್ಯಾಧಿಕಾರಿ ಕಾಶೀನಾಥ ಧನ್ನಿ, ಪ್ರಮುಖರಾದ ಗುರುಪ್ರಸಾದ ಕವಿತಾಳ, ವೆಂಕಟೇಶ ದುಗ್ಗನ್, ಹಣಮಂತ ರಾಠೋಡ್, ಡಾ.ಮಹ್ಮದ್ ಗಫಾರ್, ವೀರಶೆಟ್ಟಿ ರಾಠೋಡ್, ಹಣಮಂತಪ್ಪ ಬಂಕಲಗಿ, ನಾಗೇಶ ಭದ್ರಶೆಟ್ಟಿ, ಕೇಶವ ಚವ್ಹಾಣ್, ಜಗದೀಶಸಿಂಗ್ ದೇಶಪಾಂಡೆ, ಮಲ್ಲಿಕಾರ್ಜುನ ನೆಲ್ಲಿ, ಶ್ರೀಮಂತ ಕಟ್ಟಿಮನಿ, ಶಾಮರಾವ ಕೊರವಿ, ಭವಾನಿಸಿಂಗ್ ಠಾಕೂರ್, ಪ್ರೇಮಸಿಂಗ್ ಜಾಧವ್, ಅಶೋಕ ಚವ್ಹಾಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net