ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ

18NSG1
ನೇಸರಗಿ-ವಣ್ಣೂರ ಮಾರ್ಗ ಮಧ್ಯದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹಾಂತೇಶ ದೊಡಗೌಡರ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು. ಬಿ.ಎಫ್.ಕೊಳದೂರ, ಸುಶೀಲಾ ತುಬಾಕಿ, ವೀರಣ್ಣ ಆನಿಕಿವಿ, ಎಸ್.ಎಂ. ಪಾಟೀಲ, ಎ.ಆರ್.ಮಾಳಣ್ಣವರ, ಶ್ರೀಧರ ಮಟಗಾರ ಇತರರು ಇದ್ದರು.
Published on

ನೇಸರಗಿ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ಸ್ಥಳೀಯ ಅರ್ಬನ್ ಬ್ಯಾಂಕ್ ಎದುರಿಗೆ ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಜತ್ತ-ಜಾಂಬೋಟಿ (ರಾ.ಹೆ.-31) 23 ಕೋಟಿ ರೂ. ವೆಚ್ಚದ 12 ಕಿ.ಮೀ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮತಕ್ಷೇತ್ರದ ಎಲ್ಲ ರಸ್ತೆಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದ್ದು, ನೇಸರಗಿ ಬಸವೇಶ್ವರ ವೃತ್ತದಿಂದ ವಣ್ಣೂರ ಗ್ರಾಮದವರೆಗೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಜನರ ಸಹಕಾರ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ತುಬಾಕಿ, ಬಿಜೆಪಿ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಬಿ.ಎಫ್.ಕೊಳದೂರ, ಡಿಪಿಆರ್ ಸಂಯೋಜಕ ಶ್ರೀಪಾದ, ಬಸವರಾಜ ಮಟಗಾರ, ಎಸ್.ಎಂ.ಪಾಟೀಲ, ಎ.ಆರ್.ಮಾಳಣ್ಣವರ, ಎಇಇ ವೀರಣ್ಣ ಆನಿಕಿವಿ, ಸಚಿನ ಪಾಟೀಲ, ಅಶೋಕ ವಕ್ಕುಂದ, ಸೋಮನಗೌಡ ಪಾಟೀಲ, ಎಇ ರಮೇಶ ಹೆಡಗೆ, ಡಾ.ಮಹಾಂತೇಶ ಕೂಲಿನವರ, ಬಸವರಾಜ ಅಂಗಡಿ, ಅರ್ಬನ್ ಬ್ಯಾಂಕ್ ನಿರ್ದೇಶಕ ಅಡಿವೆಪ್ಪ ಹೊಸಮನಿ, ಯಲ್ಲನಗೌಡ ದೊಡಗೌಡರ, ಸೋಮಶೇಖರ ಮಾಳಣ್ಣವರ, ಸಲೀಂಶಹಾ ನದಾಫ್, ಬಸವರಾಜ ಬಾವಿಕಟ್ಟಿ, ಪಿಕೆಪಿಎಸ್ ನಿರ್ದೇಶಕ ಪ್ರಕಾಶ ತೋಟಗಿ, ಶ್ರೀಧರ ಮಟಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net