ಕ್ಷೇತ್ರಕ್ಕೆ ಸರ್ಕಾರದ ಯೋಜನೆ ತರಲು ಪ್ರಯತ್ನ

7 HBD 1
 ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಶನಿವಾರ ಸಿಸಿ ರಸ್ತೆ ನಿರ್ಮಾಣ ಮತ್ತು ಶ್ರೀ ಗುತ್ತಿ ಬಸವೇಶ್ವರ ದೇವಸ್ಥಾನದ ಬಳಿ ೨೫ ಲಕ್ಷ ರೂ. ವೆಚ್ಚದ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಶ್ರೀನಿವಾಸ ಪತ್ತಾರ, ಮಾಣಿಕಪ್ಪ ಖಾಶೆಂಪುರ, ರಾಜು ಪಸಾರೆ, ಚನ್ನಬಸಪ್ಪ ಸೋಪಣ್ಣ, ವೀರಶೆಟ್ಟಿ ಬದ್ರಪ್ಪನೋರು, ಶಿವಕುಮಾರ ಮೈಲೂರು, ಚಂದ್ರಶೇಖರ ಪಾಟೀಲ್, ಬಸವರಾಜ ಬಸೆಟ್ಟಿ ಇತರರಿದ್ದರು.
Published on

ಚಿಟಗುಪ್ಪ: ಕ್ಷೇತ್ರದ ಅಭಿವೃದ್ಧಿಗಾಗಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಶಿಕ್ಷಣ ಸೇರಿ ಇತರೆ ಮೂಲಸೌಕರ್ಯ ಒದಗಿಸುವುದು ನನ್ನ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಶನಿವಾರ ೩೦ ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಮತ್ತು ಶ್ರೀ ಗುತ್ತಿ ಬಸವೇಶ್ವರ ದೇವಸ್ಥಾನದ ಬಳಿ ೨೫ ಲಕ್ಷ ರೂ. ವೆಚ್ಚದ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೀದರ್ ದಕ್ಷಿಣ ಕ್ಷೇತ್ರದ ಪರಿಪೂರ್ಣ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾರಿಗೆ ಬರುವ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿರುವೆ. ನನ್ನ ಬಳಿ ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಇಲ್ಲಿವರೆಗೆ ಮಾಡಿದಂತ ಅಭಿವೃದ್ಧಿ ಕೆಲಸದ ವರದಿ ತರಿಸಿ ಪರಿಶೀಲಿಸಲಾಗುತ್ತಿದೆ. ಕಾಮಗಾರಿ ಉತ್ತಮವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಮುಖರಾದ ಶ್ರೀನಿವಾಸ ಪತ್ತಾರ, ಮಾಣಿಕಪ್ಪ ಖಾಶೆಂಪುರ, ರಾಜು ಪಸಾರೆ, ಚನ್ನಬಸಪ್ಪ ಸೋಪಣ್ಣ, ವೀರಶೆಟ್ಟಿ ಬದ್ರಪ್ಪನೋರು, ಶಿವಕುಮಾರ ಮೈಲೂರು, ಚಂದ್ರಶೇಖರ ಪಾಟೀಲ್, ಬಸವರಾಜ ಬಸೆಟ್ಟಿ, ಶರಣು ಖಾಶೆಂಪುರ, ಸಂಜುಕುಮಾರ, ಶಂಕರ ಉದಗೀರೆ, ಜಗನ್ನಾಥ ಮಜಗೆ, ರವಿ ಪಂಚಾಳ, ರಮೇಶ ಧೂಳ, ಹಮೀದ್, ಶರಣಕುಮಾರ ಪೊಲೀಸ್ ಪಾಟೀಲ್, ಶ್ರೀಹರಿ, ಮಂಜುನಾಥ ಬಿಜಾಪುರ, ರಾಜು ಬೇಲೂರು, ಬಸವರಾಜ ವಗದಾಳ, ಅಪ್ಪು ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net