ಕ್ಷೇತ್ರಕ್ಕೆ ಮೂಲಸೌಕರ್ಯ ಒದಗಿಸಲು ನಿರಂತರ ಶ್ರಮ

2
ತಲ್ಲೂರ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೆದ್ಯ ಭೂಮಿಪೂಜೆ ನೆರವೇರಿಸಿದರು. ಕೀರಪ್ಪ ಹದ್ದನ್ನವರ, ಸುಭಾನಿ ಕುದರಿ, ಎಚ್​.ಕೆ.ಚೌರಡ್ಡಿ, ಶಶಿಧರ ತಳವಾರ ಇತರರಿದ್ದರು.
Published on

ಸವದತ್ತಿ: ೇತ್ರದ ಪ್ರತಿ ಗ್ರಾಮವೂ ಅಭಿವದ್ಧಿ ಹೊಂದಿ ಮೂಲಸಮಸ್ಯೆಗಳು ನಿವಾರಣೆಯಾಗಲು ಶ್ರಮಿಸುತ್ತಿದ್ದೇನೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಗ್ರಾಮದ ವಿವಿಧ ವಾರ್ಡ್​ಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಕಾಂಕ್ರೀಟ್​ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪ್ರತಿಯೊಂದು ಕೆಲಸವನ್ನು ಗ್ರಾಮಸ್ಥರು ಗುತ್ತಿಗೆದಾರರಿಂದ ಅಚ್ಚುಕಟ್ಟಾಗಿ ಮಾಡಿಸಿಕೊಳ್ಳಬೇಕು. ಗ್ರಾಮಸ್ಥರ ಸಹಕಾರ ಬಹಳ ಮುಖ್ಯ ಎಂದರು.

ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಾಂಕ್ರೀಟ್​ ರಸ್ತೆ ನಿರ್ಮಾಣ ಮಾಡಬೇಕು ಎಂದರು.
ಗ್ರಾಮಸ್ಥರಿಂದ ಶಾಸಕ ವಿಶ್ವಾಸ ವೆದ್ಯ ಅವರನ್ನು ಸನ್ಮಾನಿಸಲಾಯಿತು. ಯುವ ಧುರೀಣ ಸುಭಾನಿ ಕುದರಿ, ಪಿಡಿಒ ಎಚ್​.ಕೆ.ಚೌರಡ್ಡಿ, ಗ್ರಾಪಂ ಸದಸ್ಯ ಶಶಿಧರ ತಳವಾರ, ಗಂಗವ್ವ ವನ್ನೂರ, ಬಸನಾಯ್ಕ ಚಿಕಾಕಿ, ಬಸವರಾಜ ಪೂಜೇರ, ನೀಲಕಂಠ ಶಿವಪೂಜಿ, ವಿಠ್ಠಲ ಉಪ್ಪಾರ, ಮಹಾಂತೇಶ ಉಪ್ಪಿನ, ಮಲ್ಲಾರಾವ ಬೋಸಲೆ, ಬಸಪ್ಪ ರೊಕ್ಕದಕಟ್ಟಿ, ರಮೇಶ ಚಿಕಾಕಿ, ಪ್ರಕಾಶ ಮುರಗೋಡ, ಪಡೆಪ್ಪ ನರಿ, ಮಹಮ್ಮದ ಕುದರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net