ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ

Published on

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಮೇಲೆ ಮೂವರು ಸೇರಿಕೊಂಡು ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿದ ಟನೆ ಕಣಬರ್ಗಿಯ ಬಸವನಕೊಳ್ಳದಲ್ಲಿ ಸೋಮವಾರ ನಡೆದಿದೆ. ಬಸವನಕೊಳ್ಳದ ನಿವಾಸಿ ಮಂಜುನಾಥ ಕೆಂಪ( 23) ಹಲ್ಲೆಗೊಳಗಾದ ಯುವಕ. ನಾಗರಾಜ್​ ಶಿಗೆಹಳ್ಳಿ ಗೆಳೆಯರು ಹಲ್ಲೆ ಮಾಡಿದ್ದಾರೆ. ಭಾನುವಾರ ಮಂಜುನಾಥ ಮತ್ತು ನಾಗರಾಜ್​ ನಡುವೆ ಕ್ಷುಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕೆ ಸೋಮವಾರ ಬೆಳಗ್ಗೆ ನಾಗರಾಜ್​ ಆತನ ಗೆಳೆಯರು ಮಂಜುನಾಥ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಮಾಳಮಾರುತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net