ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್ ಮೇಲೆ ಹಲ್ಲೆ

Published on

ಹಾಸನ: ನಗರದ ನೂತನ ಬಸ್ ನಿಲ್ದಾಣದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿದೆ.


ಹಾಸನ ವಿಭಾಗದ ಬಸ್ ನಿರ್ವಾಹಕ ತಾರೇಶ್ ಎಂಬುವರ ಮೇಲೆ ಬಸ್ ನಿಲ್ದಾಣದ ಹೋಟೆಲ್ ನೌಕರರಾದ ಅಕ್ಷಯ್, ಯಶ್ವಂತ್, ಮಂಜು, ಚೇತು ಮತ್ತು ಆಕಾಶ್ ಎಂಬುವರು ಹಲ್ಲೆ ನಡೆಸಿದ್ದಾರೆ. ಮಹಿಳೆಯೊಬ್ಬರನ್ನು ಇವರು ರೇಗಿಸುತ್ತಿದ್ದುದನ್ನು ನೋಡಿ ಪ್ರಶ್ನಿಸಿದ್ದಕ್ಕೆ ನಿರ್ವಾಹಕ ತಾರೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐವರು ಆರೋಪಿಗಳ ವಿರುದ್ಧ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net