ಕ್ಷೀರಭಾಗ್ಯ ಹಾಲಿನಪುಡಿ ಬೀದಿನಾಯಿ ಪಾಲು

25
Published on

ಪಾವಗಡ: ಅಧಿಕಾರಿಗಳ ರ್ನಿಲಕ್ಷ್ಯದಿಂದಾಗಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ನೀಡಬೇಕಾಗಿದ್ದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಪ್ಯಾಕೇಟ್​ಗಳಿರುವ ಮೂಟೆ ಪಟ್ಟಣದಲ್ಲಿ ಬೀದಿ ನಾಯಿಗಳ ಪಾಲಾಗಿದೆ.

ಪಟ್ಟಣದ ವೆಂಕಟಾಪುರ ರಸ್ತೆಯಲ್ಲಿ ಭಾನುವಾರ ಸ್ವಚ್ಛತಾ ಸಿಬ್ಬಂದಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತ್ಯಾಜ್ಯ ಸಾಗಿಸುವಾಗ ಟ್ರ್ಯಾಕ್ಟರ್​ನಿಂದ ಮೂಟೆ ಜಾರಿ ಬಿದ್ದಿದೆ. ನಂತರ ಬೀದಿ ನಾಯಿಗಳು ಎಳೆದಾಡಿಕೊಂಡು ಹಾಲಿನ ಪುಡಿ ತಿನ್ನುತ್ತಿವರ ಮಾಹಿತಿಯನ್ನು ಸಾರ್ವಜನಿಕರು ನೀಡಿದ್ದಾರೆ.

ಬೀದಿ ನಾಯಿಗಳು ಹಾಲಿನ ಪುಡಿ ಪ್ಯಾಕೇಟ್​ಗಳನ್ನು ಎಳೆದಾಡಿಕೊಂಡು ತಿನ್ನುತ್ತಿರುವ ವಿಡಿಯೋ, ಫೋಟೋ ತೆಗೆದು ಸಂಬಂಧಪಟ್ಟ ರ್ನಿಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜೀಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಮುಖಂಡ ಪಾವಗಡ ರವಿ ಪ್ರತಿಕ್ರಿಯಿಸಿ, ಮಕ್ಕಳ ಪೌಷ್ಟಿಕಾಂಶ ಕೊರತೆ ನಿವಾರಣೆಗೆ ಹಾಲು ನೀಡಲು ಸರ್ಕಾರದ ಯೋಜನೆಗೆ ಜಾರಿ ಮಾಡಿ ಹಾಲಿನಪುಡಿ ನೀಡಿದರೆ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಬೀದಿ ನಾಯಿಗಳ ಪಾಲಾಗಿವೆ. ಘಟನೆಗೆ ಸಂಬಂಧಿಸಿದಂತೆ ಬಿಇಒ ಮತ್ತು ಅಕ್ಷರದಾಸೋಹ ನಿರ್ದೇಶಕರು ಪರಿಶೀಲನೆ ನಡೆಸಿ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕ್ಷಿರಭಾಗ್ಯ ಯೋಜನೆಯಡಿಯಲ್ಲಿ ನೀಡುವ ಹಾಲಿನ ಪುಡಿ ಪ್ಯಾಕೇಟ್​ಗಳನ್ನು ಬೀದಿನಾಯಿಗಳು ಎಳೆದಾಡಿ ತಿನ್ನುತ್ತಿರುವ ಮಾಹಿತಿ ಬಂದಿದೆ. ಪಟ್ಟಣದ ಶಾಲೆಗಳಿಗೆ ಹಾಗೂ ಅಂಗನವಾಡಿ ಕೆಂದ್ರಕ್ಕೂ ಹಾಲಿನ ಪುಡಿ ಪ್ಯಾಕೇಟ್​ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ತಂಡ ರಚಿಸಿ ಪರಿಶೀಲನೆ ನಡೆಸಲಾಗುವುದು.

| ಶಂಕರಪ್ಪ ನಿರ್ದೇಶಕ ಅಕ್ಷರ ದಾಸೋಹ ಇಲಾಖೆ ಪಾವಗಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net