

ಕಲಬುರಗಿ: ನಗರದ ನೆಹರು ಗಂಜ್‌ನ ಗೋದಾಮೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಕ್ಷೀರ ಭಾಗ್ಯದ ಹಾಲಿನ ಪೌಡರ್ ಪ್ರಕರಣ ಹೊಸ ರೂಪ ಪಡೆದಿದ್ದು, ಮಾ.೩ರಂದು ೪.೫ ಕ್ವಿಂಟಾಲ್ ಅಕ್ರಮ ಹಾಲಿನ ಪೌಡರ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದ ಪೊಲೀಸ್ ಮೂಲಗಳು ಅದೇ ದಿನ ದಾಖಲಾದ ಎಫ್‌ಐಆರ್‌ನಲ್ಲಿ ೧೭೫ ಕೆ.ಜಿ.ವಶಕ್ಕೆ ಪಡೆಯಲಾಗಿದೆ ಎಂದು ಪ್ರಕರಣ ದಾಖಲಿಸಿದ್ದು, ಅನುಮಾನ ಮೂಡಿಸಿದೆ.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಮಂಗಳವಾರ ಬಂದ ಮಾಹಿತಿಯಂತೆ ಗಂಜ್ ಪ್ರದೇಶದ ಮಹಾಲಕ್ಷಿö್ಮÃ ಟ್ರೇಡರ್ಸ್ನಲ್ಲಿ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಷರ ದಾಸೋಹದ ಕ್ಷೀರಭಾಗ್ಯದ ಐದು ಚೀಲಗಳಲ್ಲಿ ೧೭೫ ಕೆ.ಜಿ. ಹಾಲಿನ ಪೌಡರ್ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಟ್ರೇಡರ್ಸ್ ಮಾಲಿಕ ಶರಣು ಕರಗರ ಬೇಲೂರ, ಆತನ ಮುನೀಮ್ ಸಂತೋಷ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಕಾAತ ಕಿಣಗಿ, ಬಿಇಒ ಈಶ್ವರಪ್ಪ ನಿರಡಗಿ, ಪೊಲೀಸ್ ಸಿಬ್ಬಂದಿ ಬಂದೇನವಾಜ್, ಶಿವಾನಂದ, ರವಿಕುಮಾರ ಭಾಗವಹಿಸಿದ್ದರು.
ಅನುಮಾನ ಮೂಡಿಸಿದ ಅಧಿಕಾರಿಗಳ ನಡೆ: ಅಕ್ಷರ ದಾಸೋಹದ ಕ್ಷೀರ ಭಾಗ್ಯದ ಹಾಲಿನ ಪೌಡರ್‌ಗಳ ಪಾಕೆಟ್‌ಗಳ ಅಕ್ರಮ ಸಂಗ್ರಹ, ಮಾರಾಟದ ಸ್ಥಳದ ಮೇಲೆ ದಾಳಿ, ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸುವುದು, ಮಾಹಿತಿ ಹಂಚಿಕೆ ಇಡೀ ಪ್ರಕ್ರಿಯೆಯೂ ಅನುಮಾನ ಮೂಡಿಸಿದೆ. ಮಾ.೩ರಂದು ೪.೫ ಕ್ವಿಂಟಾಲ್ ಅಕ್ರಮ ಹಾಲಿನ ಪೌಡರ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲ ತಿಳಿಸಿದ್ದವು. ಯಾರ ವಿರುದ್ಧ ಪ್ರಕರಣ ಎಂಬುದು ಸ್ಪಷ್ಟಪಡಿಸಿರಲಿಲ್ಲ. ತಡರಾತ್ರಿವರೆಗೂ ಎಫ್‌ಐಆರ್ ಮಾಹಿತಿ ಹಂಚಿಕೊಳ್ಳಲಿಲ್ಲ. ಆದರೆ ಮಾ.೪ರಂದು ಎಫ್‌ಐಆರ್ ಪ್ರತಿಯಲ್ಲಿ ಕೇವಲ ೧೭೫ ಕೆ.ಜಿ.ತೋರಿಸಿದ್ದಾರೆ. ಇಡೀ ಪ್ರಕರಣ ಅಧಿಕಾರಿಗಳ ನಡೆ, ಅನುಮಾನ ಮೂಡಿಸಿದೆ.