ಕ್ಷೀಣಿಸಿದ ಕೋವಿಡ್ ಸೋಂಕಿತರ ಸಂಖ್ಯೆ

27-RNR-05
Published on

ಹಾವೇರಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡುವಿಕೆ ಮುಂದುವರಿದಿದ್ದು, ಸೋಮವಾರ ಐವರು ಪೊಲೀಸರು, ಇಬ್ಬರು ಹೋಂಗಾರ್ಡ್, ಓರ್ವ ಚಾಲಕ ಸೇರಿ 27 ಜನರಿಗೆ ಸೋಂಕು ದೃಢಪಟ್ಟಿದೆ. 22 ಜನ ಗುಣವಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 787ಕ್ಕೇರಿದ್ದು, 283 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 480 ಜನರು ಗುಣವಾಗಿ ಬಿಡುಗಡೆಗೊಂಡಿದ್ದರೆ, 24 ಜನ ಮೃತಪಟ್ಟಿದ್ದಾರೆ. ಹಾವೇರಿ ತಾಲೂಕಿನ 8, ರಾಣೆಬೆನ್ನೂರ 6, ಶಿಗ್ಗಾಂವಿ 5, ಹಾನಗಲ್ಲ 2, ಬ್ಯಾಡಗಿ ತಾಲೂಕಿನ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಸೋಮವಾರ ಯಾರೂ ಮೃತಪಟ್ಟಿಲ್ಲ.

ರಾಣೆಬೆನ್ನೂರ ತಾಲೂಕು: ರೈಲ್ವೆ ನಿಲ್ದಾಣದ ಬಳಿಯ 36 ವರ್ಷದ ಪುರುಷ, 22 ವರ್ಷದ ಯುವತಿ, ಪೀರಜಾದೆ ಓಣಿಯ 32 ವರ್ಷದ ಮಹಿಳೆ, 50 ವರ್ಷದ ಪುರುಷ, ಬಾದಾಮಿ ಚಾಳದ 73 ವರ್ಷದ ವೃದ್ಧ, ಚಳಗೇರಿಯ 35 ವರ್ಷದ ಮಹಿಳೆ, 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಹಿರೇಕೆರೂರ ತಾಲೂಕು: ಪಟ್ಟಣದ ಪೊಲೀಸ್ ಠಾಣೆಯ 32, 51, 50, 37, ಹಾಗೂ 42 ವರ್ಷದ ಪೊಲೀಸ್ ಕಾನ್ಸ್​ಟೇಬಲ್​ಗಳು, 40 ವರ್ಷದ ಹೋಂ ಗಾರ್ಡ್​ಗೆ ಸೋಂಕು ದೃಢಪಟ್ಟಿದೆ.

ಸವಣೂರ ತಾಲೂಕು: ತಾಲೂಕು ಆಸ್ಪತ್ರೆ ಡಿ ಗ್ರೂಪ್ ನೌಕರ 21 ವರ್ಷದ ಯುವಕ, ಅಂಬೇಡ್ಕರ್ ನಗರದ 33, 40, 38 ವರ್ಷದ ಮಹಿಳೆ, ವಾಹನ ಚಾಲಕನಾಗಿದ್ದ 46 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಶಿಗ್ಗಾಂವಿ ತಾಲೂಕು: ಗಂಗೀಭಾವಿಯಲ್ಲಿದ್ದ 23 ವರ್ಷದ ಕೆಎಸ್​ಆರ್​ಪಿ ಪೊಲೀಸ್ ಪೇದೆ, ಬಂಕಾಪುರದ 79 ವರ್ಷದ ವೃದ್ಧ, 31 ವರ್ಷದ ಪುರುಷ, ಕತೀಬ ಪ್ಲಾಟ್​ನ 53ರ ಪುರುಷ, 24 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ ತಾಲೂಕು: ಅಕ್ಕೂರ ಗ್ರಾಮದ 45 ವರ್ಷದ ಪುರುಷ, ಭೂವೀರಾಪುರದ 56 ವರ್ಷದ ಮಹಿಳೆ, ಶಿವಾಜಿನಗರದ 52 ವರ್ಷದ ಪುರುಷನಿಗೆ ಹಾಗೂ ಹಾನಗಲ್ಲ ತಾಲೂಕು ಅಕ್ಕಿವಳ್ಳಿಯ 28 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಕಾಗಿನೆಲೆ ಪೊಲೀಸ್ ಠಾಣೆ ಸೀಲ್​ಡೌನ್

ಬ್ಯಾಡಗಿ ತಾಲೂಕಿನ ಕಾಗಿನೆಲೆ ಪೊಲೀಸ್ ಠಾಣೆಯ ಹವಾಲ್ದಾರ್ ಒಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸ್ ಠಾಣೆ ಸೀಲ್​ಡೌನ್ ಮಾಡಲಾಗಿದೆ. ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 52 ವರ್ಷದ ಪುರುಷ ಹವಾಲ್ದಾರಗೆ ಸೋಮವಾರ ದೃಢಪಟ್ಟಿದೆ. ಹೀಗಾಗಿ ಸಿಪಿಐ ಭಾಗ್ಯವತಿ ಬಂಟೆ ನೇತೃತ್ವದಲ್ಲಿ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದ್ದು, ಎಲ್ಲ ಸಿಬ್ಬಂದಿಗೆ ಕ್ವಾರಂಟೈನ್​ನಲ್ಲಿರಲು ತಿಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net