ಕ್ಷಿಪ್ರಪ್ರಸಾದ ಮಹಾಗಣಪತಿ ವಾರ್ಷಿಕೋತ್ಸವ ಪೂಜೆ

Maha Ganapathi
Published on

ಚಿತ್ರದುರ್ಗ: ನಗರದ ಭೀಮಸಮುದ್ರ ಮಾರ್ಗದ ಧವಳಗಿರಿ ಬಡಾವಣೆಯ 2ನೇ ಹಂತದಲ್ಲಿರುವ ಶ್ರೀ ಕ್ಷಿಪ್ರ ಪ್ರಸಾದ ಮಹಾಗಣಪತಿ ಸನ್ನಿಧಾನದ 11ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ವಿಶೇಷ ಪೂಜಾ ಕೈಂಕರ್ಯ ಜರುಗಿದವು.

ಬೆಳಗ್ಗೆ 8ರಿಂದ ಸ್ವಸ್ತಿ ಪುಣ್ಯಾಹ ವಾಚನ, ಆಚಾರ್ಯದಿ ಋತ್ವಿಗ್ವರಣ, ಪಂಚಗವ್ಯ ಹವನ, ಕ್ಷಿಪ್ರ ಪ್ರಸಾದ ಮಹಾಗಣಪತಿಗೆ ಮಹಾನ್ಯಾಸ ಪೂರ್ವಕ ಲಘು ರುದ್ರಾಭಿಷೇಕ, ಮಹಾಭಿಷೇಕ, ಪುಷ್ಪಾಲಂಕಾರ ಸೇವೆ ಸೇರಿ ಇನ್ನಿತರೆ ಪೂಜೆ ಬಳಿಕ ಮಹಾಮಂಗಳಾರತಿ ನೆರವೇರಿತು. ಇದೇ ವೇಳೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಸಂಜೆ 6.30ರಿಂದ ರಾಕ್ಷೋಘ್ನ ಹೋಮ ಜರುಗಿತು. 7ರ ನಂತರ ಜಾನಪದ, ಭಕ್ತಿಗೀತೆ, ಲಾವಣಿ ಹಾಗೂ ಶರಣರ ವಿಚಾರಧಾರೆ ಕಾರ್ಯಕ್ರಮ ನಡೆದವು. ನೂರಾರು ಭಕ್ತರು ಪಾಲ್ಗೊಂಡು ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ಸ್ವೀಕರಿಸಿದರು.

10ರಂದು ಬೆಳಗ್ಗೆ 8ರಿಂದ ಮಹಾಗಣಪತಿಗೆ ಪಂಚಾಮೃತ ಸಹಿತ ರುದ್ರಾಭಿಷೇಕ ಹಾಗೂ ನವಗ್ರಹ ಪುರಸ್ಸರ ಅಷ್ಟದ್ರವ್ಯ ಮಹಾಗಣಪತಿ ಹೋಮದ ಪೂರ್ಣಾಹುತಿ, ಅಲಂಕಾರ ಸೇವೆ, ಮಧ್ಯಾಹ್ನ 12.30ಕ್ಕೆ ಅಷ್ಟಾವಧಾನ ಮಹಾಮಂಗಳಾರತಿ, ಮಧ್ಯಾಹ್ನ 1ರ ನಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇಗುಲ ಅಭಿವೃದ್ಧಿ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net