ಕ್ಷಯರೋಗ ಹೆಚ್ಚು ಪತ್ತೆ ಮಾಡಬೇಕು

0712KLB08
Published on

ಕಲಬುರಗಿ: ಹೆಚ್ಚಿನ ಪ್ರಮಾಣದಲ್ಲಿ ಕ್ಷಯ ರೋಗ ಪತ್ತೆ ಮಾಡಿ, ಸಾವಿನ ಪ್ರಮಾಣ ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸಲಹೆ ನೀಡಿದರು.

ಶಿವಾಜಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪತ್ತೆ ಹಚ್ಚಿದರೆ ಸಾವಿನ ಪ್ರಮಾಣ ಕ್ಷೀಣಿಸುತ್ತದೆ. ಕುಟುಂಬದಲ್ಲಿ ಒಬ್ಬರಿಗೆ ಬಂದರೆ ಕ್ಷಯ ರೋಗ ಎಲ್ಲರಿಗೂ ಹರಡುವ ಸಾಧ್ಯತೆ ಇದ್ದು, ಜಾಗೃತಿ ಮೂಡಿಸಬೇಕು ಎಂದರು.

೧೫ ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತ ಮಾಡಲಾಗಿತ್ತು. ಬಾಕಿ ಗ್ರಾಪಂ ಆಗಲು ನೈತಿಕತೆ, ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮಾರ್ಚ್ ೨೪ರಂದು ಆಚರಿಸುವ ಕ್ಷಯ ರೋಗ ದಿನಾಚರಣೆಗೆ ೧೦೦ ದಿನ ಬಾಕಿ ಇದ್ದು, ಕ್ಷಯ ಮುಕ್ತ ಜಿಲ್ಲೆಗೆ ಶ್ರಮಿಸಿ ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಕಾAತ ನರಬೋಳ ಮಾತನಾಡಿ, P್ಷÀಯರೋಗ ನಿರ್ಮೂಲನೆಗೆ ಹಲವು ತಂಡ ರಚಿಸಿದ್ದು, ನಮ್ಮ ಜಿ¯್ಲೆ ೩೧ನೇ ಸ್ಥಾನ ಇತ್ತು. ೧೫ ಅಥವಾ ೧೬ನೇ ಸ್ಥಾನದಲ್ಲಿ ಇದೆ. ಎಲ್ಲರೂ ಒಗ್ಗೂಡಿದರೆ ಯಶಸ್ವಿಯಾಗಲು ಸಾಧ್ಯ ಎಂದರು.

ಡಾ.ಶರಣಬಸಪ್ಪ ಗಣಜಲಖೇಡ ಮಾತನಾಡಿ, ಕೆಮ್ಮು, ಕಫ, ಜ್ವರ ಕಂಡು ಬರುತ್ತವೆ. ಮನುಷ್ಯನ ತೂಕ ಕಡಿಮೆ ಆಗುತ್ತದೆ. ಸಾವು ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಆದ್ದರಿಂದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಟ್ರೂ ನಾಟ್ ಮತ್ತು ಎಕ್ಸ್ರೆ ಮಷಿನ್ P್ಷÀಯರೋಗದ ಮೊಬೈಲ್ ವ್ಯಾನ್‌ಗೆ ಚಾಲನೆ ನೀಡಲಾಯಿತು. ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು. ಕ್ಷಯ ರೋಗಿಗಳಿಗೆ ಆಹಾರದ ಪೊಟ್ಟಣ ವಿತರಿಸಲಾಯಿತು. ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ ಅಧ್ಯP್ಷÀತೆ ವಹಿಸಿದ್ದರು. ಸುರೇಶ ದೊಡ್ಡಮನಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಡಬ್ಲೂಎಚ್‌ಒ ಡಾ.ನಿಬ್ರಾ ಶಿರೀನ್ ಮಾತನಾಡಿದರು. ಜಿ¯್ಲÁ ಕಾಲರ ನಿಯಂತ್ರಣಾಧಿಕಾರಿ ಡಾ.ವಿವೇಕನಾಂದ ರೆಡ್ಡಿ, ಜಿ¯್ಲÁ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜಕುಮಾರ, ಡಾ.ಸಿದ್ರಾಪ್ಪ ಪಾಟೀಲ ಭೂಸನೂರು, ಡಾ.ಶಿವಶರಣಪ್ಪ, ಡಾ.ಮಾರುತಿ ಕಾಂಬಳೆ, ಡಾ.ಸಂಧ್ಯಾರಾಣಿ, ಡಾ.ರೇಣುಕಾ, ಡಾ.ವೀಣಾ ಕಾಳಪ್ಪ, ಡಾ.ವೇಣುಗೋಪಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net