ಕ್ಷಯ ರೋಗಿಗಳಿಗೆ ಆಹಾರ ಕಿಟ್ ವಿತರಣೆ

ಕ್ಷಯ ರೋಗಿಗಳಿಗೆ ಆಹಾರ ಕಿಟ್ ವಿತರಣೆ
Published on

ಹಾಸನ: ಯಾರೊಬ್ಬರು ಅಪೌಷ್ಟಿಕತೆಯಿಂದ ಬಳಲಬಾರದು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ವಿವಿಧ ಯೋಜನೆಗಳ ಮೂಲಕ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ನೆರವಿಗೆ ಬರುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜು ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಗೂ ಜೀವನಾಶ್ರಯ ನೆಟ್‌ವರ್ಕ್ ಸಂಯುಕ್ತಾಶ್ರಯದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕ್ಷಯ ರೋಗಿಗಳಿಗೆ ಉಚಿತ ದಿನಸಿ ಕಿಟ್ ಮತ್ತು ಎಚ್‌ಐವಿ ಸೋಂಕಿತರಿಗೆ ಹೈಜೀನ್ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವುದನ್ನು ಕಾಣುತ್ತಿದ್ದೇವೆ. ಇದನ್ನು ಹೋಗಲಾಡಿಸುವುದು ಸಮಾಜದ ಮತ್ತು ಸರ್ಕಾರದ ಕರ್ತವ್ಯ. ರೆಡ್‌ಕ್ರಾಸ್ ಸಂಸ್ಥೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜಪಾನ್‌ನಲ್ಲಿ ಬೊಜ್ಜು ಬೆಳೆಸಿಕೊಂಡವರ ಮತ್ತು ಆಹಾರ ಪದಾರ್ಥ ವ್ಯರ್ಥ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ನಮ್ಮಲ್ಲಿ ಊಟಕ್ಕೆ ಅಗತ್ಯಕ್ಕಿಂತ ಹೆಚ್ಚು ಹಾಕಿಸಿಕೊಂಡು ವ್ಯರ್ಥ ಮಾಡುವುದನ್ನೇ ದೊಡ್ಡಸ್ಥಿಕೆ ಎಂದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕ್ಷಯ ರೋಗಿಗಳು ಹಾಗೂ ಎಚ್‌ಐವಿ ಸೊಂಕಿತರಿಗೆ ಆಹಾರ ಪದಾರ್ಥಗಳು ಮತ್ತು ವೈದ್ಯಕೀಯ ಕಿಟ್ ವಿತರಣೆ ಮಾಡಲಾಯಿತು. ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಎಚ್.ಪಿ. ಮೋಹನ್, ಡಿಹೆಚ್‌ಒ ಡಾ. ಶಿವಸ್ವಾಮಿ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬಿ. ಸಂಧ್ಯಾ, ರೆಡ್‌ಕ್ರಾಸ್ ಖಜಾಂಚಿ ಎಚ್ .ಡಿ. ಜಯೇಂದ್ರ ಕುಮಾರ್, ನಿರ್ದೇಶಕ ಎಸ್.ಎಸ್. ಪಾಷ, ಜೀವನಾಶ್ರಯ ನೆಟ್‌ವರ್ಕ್ ಅಧ್ಯಕ್ಷ ರಂಗಸ್ವಾಮಿ, ಅನುಗನಾಳು ಕೃಷ್ಣಮೂರ್ತಿ, ಬಿ.ಆರ್. ಉದಯ್ ಕುಮಾರ್, ಚಂದ್ರಶೇಖರ್, ಟಿಹೆಚ್‌ಒ ಡಾ. ವಿಜಯ್, ನಿರ್ಮಲಾ, ಕೆ.ಟಿ. ಜಯಶ್ರೀ, ಮಂಜಪ್ಪಗೌಡ, ಕುಮಾರ್, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net