ಕ್ಷಯ ರೋಗಕ್ಕೆ ಪೌಷ್ಟಿಕ ಆಹಾರವೇ ಮದ್ದು

WEBBBBB SGR
Published on

ಸಾಗರ: ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವ ಮೂಲಕ ಕ್ಷಯ ರೋಗಿಗಳು ಕಾಯಿಲೆಯಿಂದ ಮುಕ್ತರಾಗಬೇಕು ಎಂದು ಸರ್ಜನ್ ಡಾ. ಪರಪ್ಪ ಹೇಳಿದರು.

ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರ ಮತ್ತು ರೋಟರಿ ಕ್ಲಬ್ ಶುಕ್ರವಾರ ಆಯೋಜಿಸಿದ್ದ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷಯ ರೋಗಿಗಳು ಪೌಷ್ಟಿಕ ಆಹಾರ ಸೇವನೆ ಜತೆಗೆ ಕಾಲಕಾಲಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದರೆ ಕ್ಷಯದಿಂದ ಗುಣಮುಖರಾಗಲು ಸಾಧ್ಯ. ಕ್ಷಯ ರೋಗಿಗಳು ಇನ್ನೊಬ್ಬರಿಗೆ ತಮ್ಮ ಕಾಯಿಲೆ ಹರಡದಂತೆ ಎಚ್ಚರಿಕೆ ವಹಿಸಬೇಕು. ಜತೆಗೆ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವತ್ತ ಗಮನ ಹರಿಸಬೇಕು. ರಕ್ತನಿಧಿ ಕೇಂದ್ರ ಮತ್ತು ರೋಟರಿ ಸಂಸ್ಥೆ ಕ್ಷಯ ರೋಗಿಗಳಿಗೆ ಉಚಿತವಾಗಿ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net