ಕ್ಷಯ ಪತ್ತೆ-ಚಿಕಿತ್ಸೆ ಉಚಿತ

25 KAMPLI 03
Published on

ಕಂಪ್ಲಿ: ಕ್ಷಯ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಈ ಕುರಿತ ತಪ್ಪು ತಿಳುವಳಿಕೆಯಿಂದ ಹೊರಬರಬೇಕಿದೆ ಎಂದು ಸರ್ಕಾರಿ ಸಮುದಾಯ ಆರೋಗ್ಯದ ಕೇಂದ್ರದ ವೈದ್ಯ ಭರತ್ ಪದ್ಮಶಾಲಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ಪತ್ತೆ ಮತ್ತು ಚಿಕಿತ್ಸೆ ಉಚಿತವಾಗಿದೆ. ಕ್ಷಯ ರೋಗಿಯನ್ನು ಮುಟ್ಟುವುದು, ಕೈ ಕುಲುಕುವುದರಿಂದ ರೋಗ ಹರಡುವುದಿಲ್ಲ. ಕ್ಷಯ ರೋಗಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿದೆ ಎಂದರು.

ಎಸ್‌ಟಿಎಸ್ ಈರಣ್ಣ ನಾಯಕ, ನೇತ್ರಾಧಿಕಾರಿ ಪ್ರಕಾಶಗೌಡ, ಎಲ್‌ಟಿಒ ಮಹಾಂತೇಶ್, ಟಿಬಿಎಚ್‌ವಿ ಪರಿಮಳಾ, ನರ್ಸಿಂಗ್ ಅಧಿಕಾರಿ ದೇವಣ್ಣ, ಆರ್‌ಕೆಎಸ್‌ಕೆ ಮಂಜುನಾಥ, ಆಶಾ ಕಾರ್ಯಕರ್ತೆಯರು, ರೋಗಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net