

ಚಿತ್ರದುರ್ಗ: ಕ್ಷಯ ರೋಗದ ಕುರಿತ ಭೀತಿ ತ್ವರಿತವಾಗಿ ಕೊನೆಗಾಣಿಸೋಣ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಸಲಹೆ ನೀಡಿದರು.
ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯಿಂದ ನಡೆದ ಕ್ಷಯಮುಕ್ತ 100 ದಿನಗಳ ಅಭಿಯಾನದಲ್ಲಿ ಮಾತನಾಡಿದರು.
ಈ ರೋಗವೂ ದೇಶದ ಅತಿ ದೊಡ್ಡ ತೊಂದರೆಗಳಲ್ಲೊಂದು. ಹೀಗಾಗಿ ಭಾರತ ಕ್ಷಯ ಮುಕ್ತಗೊಳಿಸಲು ಸಮುದಾಯವು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಕ್ಷಯ ರೋಗವನ್ನು ಬೇಗ ಪತ್ತೆ ಹಚ್ಚಿ, ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆದು, ಪೌಷ್ಟಿಕ ಆಹಾರ ಸೇವನೆಯೊಂದಿಗೆ ಗುಣಪಡಿಸಬಹುದು. ಅಭಿಯಾನ ಈಗಾಗಲೇ ಆರಂಭವಾಗಿದ್ದು, 2025ರ ಮಾ. 24ರವರೆಗೆ ಎಲ್ಲ ಆಯುಷ್ಮಾನ್ ಆರೋಗ್ಯ ಮಂದಿರ, ಪಿಎಚ್‌ಸಿ, ಸಿಎಚ್‌ಸಿ, ಪ್ರತಿ ಗ್ರಾಮಗಳ ಮನೆಗಳಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ, ಮುಖ್ಯಶಿಕ್ಷಕ ಎನ್.ಸುರೇಶ್, ಸಹ ಶಿಕ್ಷಕರಾದ ಸುಕನ್ಯಾ, ಲಕ್ಷ್ಮೀದೇವಿ, ಸರಸ್ವತಿ, ಅಪ್ಸಾನಾ ಬಾನು, ಅಮೀನಾ, ಮಾರುತಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಭಾಗ್ಯಲಕ್ಷ್ಮೀ, ತಾಲೂಕು ಆಶಾ ಬೋಧಕಿ ತಬಿತಾ, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಕಾತ್ಯಾಯನಮ್ಮ, ನಗರ ಟಿಬಿ ಚಿಕಿತ್ಸಾ ಮೇಲ್ವಿಚಾರಕ ಸಂತೋಷ್, ಯೋಗ ಶಿಕ್ಷಕ ರವಿ ಅಂಬೇಕರ್ ಇತರರಿದ್ದರು.