ಕ್ಷಮೆ ಕೋರುವಂತೆ ಒತ್ತಾಯಿಸಿ ಈಡಿಗ ಮಹಾ ಮಂಡಳದಿಂದ ಪ್ರತಿಭಟನೆ

44
Published on

ಮೈಸೂರು: ಈಡಿಗ ಸಮಾಜದ ಡಾ.ಪ್ರಣವಾನಂದ ಸ್ವಾಮೀಜಿ ಕುರಿತು ಕರ್ನಾಟಕ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಕೀಳಾಗಿ ಮಾತನಾಡಿರುವುದಕ್ಕೆ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರೀಯ ಈಡಿಗ ಮಹಾ ಮಂಡಳದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಗಾಂಧಿ ವೃತ್ತದಲ್ಲಿ ಧರಣಿ ನಡೆಸಿದ ಸದಸ್ಯರು, ಪ್ರಣವಾನಂದರು ನಮ್ಮ ಸಮುದಾಯದ ಸ್ವಾಮೀಜಿ ಅಲ್ಲ. ಅವರು ಸಮಾಜದ ಅವಿದ್ಯಾವಂತರಿಗೆ ದಾರಿ ತಪ್ಪಿಸುತ್ತಿದ್ದಾರೆಂದು ಸಂಘದ ಅಧ್ಯಕ್ಷ ತಿಮ್ಮೇಗೌಡ ಹೇಳಿಕೆ ನೀಡುವುದು ಸರಿಯಲ್ಲ. ಈ ಹೇಳಿಕೆಯನ್ನು ಹಿಂಪಡೆದು ಸ್ವಾಮೀಜಿ ಬಳಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ರವಿ ಕುಂಬಾರಕೊಪ್ಪಲು, ಕೆ.ಎಂ.ರವಿಕುಮಾರ್, ಶಿವರಾಜ್‌ಕುಮಾರ್, ಮಂಜುನಾಥ್, ಶಿವಣ್ಣ, ಅಪ್ಪು, ವೆಂಕಟೇಶ್, ಸುರೇಶ್, ಮನೋಜ್, ಜಗದೀಶ್, ಚಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net