

ಕುಣಿಗಲ್: ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಮೆರವಣಿಗೆ ವೇಳೆಯಲ್ಲಿ ಆದ ಲೋಪದೋಷದ ಸಂಬಂಧ ನಾಡ ಹಬ್ಬಗಳ ಸಮಿತಿ ಅಧ್ಯಕ್ಷರಾಗಿದ್ದ ತಹಸೀಲ್ದಾರ್ ಮಹಾಬಲೇಶ್ವರ ಬೇಷರತ್ ಕ್ಷಮೆ ಕೋರಿದರು.
ನ್ಯಾಯಾಲಯ ಆವರಣದಲ್ಲಿ ಬುಧವಾರ ವಿವಿಧ ಸಮುದಾಯದ ಮುಖಂಡರ ಸಭೆ ಕರೆದು ಅವರು, ಟನೆ ಸಂಬಂಧ ಕಾರಣ ಕೇಳಿ ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಲಾಗಿದೆ. ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಶಾಸಕರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಅಂದು ಎಡೆಯೂರಿಗೆ ಮುಖ್ಯಮಂತ್ರಿಗಳು ಆಗಮಿಸಿದ್ದ ಕಾರಣ ಸಭೆಗೆ ಗೈರಾಗಿದ್ದೆ. ಆಚರಣೆ ಸಂಬಂಧ ಒಂದೊಂದು ಇಲಾಖೆಗೆ ಒಂದೊಂದು ಜವಾಬ್ದಾರಿ ವಹಿಸಲಾಗಿತ್ತು. ಮೆರವಣಿಗೆ ವಾಹನ ಹಾಗೂ ಡೊಳ್ಳುಕುಣಿತವನ್ನು ಪುರಸಭೆ ಅಧ್ಯಕ್ಷರು ವಹಿಸಿಕೊಂಡಿದ್ದರು. ಪುರಸಭೆ ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಪ್ಲೆಕ್ಸ್ ಕಟ್ಟಲಾಗಿದೆ ಎಂದು ತಿಳಿಯುತ್ತಿದ್ದಂತೆ ಬೇರೆ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು ಎಂದು ಸ್ಪಷ್ಟಪಡಿಸಿದರು.
ತರಾಟೆ: ನೀವು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು, ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಮಾಡಲಾಗಿದೆ. ಇದರ ಹೊಣೆ ನೀವೇ ಹೊರಬೇಕು ಎಂದು ತರಾಟೆ ತೆಗೆದುಕೊಂಡ ಮುಖಂಡರು ತಪ್ಪಿತತ್ಥ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆಂಪೇಗೌಡರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಅಪಮಾನ ಮಾಡಬೇಕೆಂಬ ಉದ್ದೇಶ ಇರಲಿಲ್ಲ. ಆಕಸ್ಮಿಕವಾಗಿ ಆಗಿರುವ ಟನೆಯಿಂದ ನೋವಾಗಿದೆ ಎಂದು ಹೇಳಿದ ತಹಸೀಲ್ದಾರ್, ಈ ವಿಷಯದಲ್ಲಿ ಕ್ಷಮೆ ಕೋರುತ್ತೇನೆ. ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಲಾಗುವುದು ಎಂದರು.
ಈ ಸಂಬಂಧ ಮುಖಂಡರೊಂದಿಗೆ ಚರ್ಚಿಸಿ ನಾಳೆ ತಿಳಿಸುವುದಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ನಳಿನಾ ಬೈರಪ್ಪ, ಕೆ.ಎಲ್.ಹರೀಶ್, ಸದಸ್ಯ ಇ.ಮಂಜು, ಚುಂಚಶ್ರೀ ಮಹಿಳಾ ಸಂದ ಅಧ್ಯೆ ಅನಸೂಯಾ, ವಕೀಲ ಸಂದ ಅಧ್ಯಕ್ಷ ಬಾಬು, ವಕೀಲ ಸತೀಶ್, ಡಿಎಸ್ಎಸ್ ಸಂಚಾಲಕ ವಿ.ಶಿವಶಂಕರ್, ಮುಖಂಡರಾದ ಜಯರಾಮ್, ತರಿಕೆರೆ ಪ್ರಕಾಶ್, ಮಂಜುನಾಥ್, ಮೊದೂರು ಗಂಗಾಧರ್, ದೇವರಾಜ್, ಎನ್.ರಾಜೇಶ್ ಇದ್ದರು.