ಕ್ವಿಟ್ ಇಂಡಿಯಾ ದಿನ ದಿನಾಚರಣೆ

rcr
ರಾಯಚೂರಿನ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ಕ್ವಿಟ್ ಇಂಡಿಯಾ ದಿನ ಆಚರಿಸಲಾಯಿತು. ಪಕ್ಷದ ನಗರ ಘಟಕದ ಅಧ್ಯಕ್ಷ ಜಿ.ಬಸವರಾಜ ರೆಡ್ಡಿ, ಮುಖಂಡರಾದ ಕೆ.ಶಾಂತಪ್ಪ, ಅಮರೇಶಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಬಸವರಾಜ ಪಾಟೀಲ್ ದರೂರ, ಭೀಮನಗೌಡ ನಾಗಡದಿನ್ನಿ, ಆಂಜನೇಯ, ಬಸವರಾಜ ಪಾಟೀಲ್ ಅತ್ತನೂರು, ನವನೀತಾ ಆದೋನಿ, ಶಶಿಕಲಾ ಭೀಮರಾಯ, ಮಂಜುಳಾ, ರಾಣಿ ರಿಚರ್ಡ್ ಇದ್ದರು.
Published on

ರಾಯಚೂರು: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ಕ್ವಿಟ್ ಇಂಡಿಯಾ ದಿನ ಆಚರಿಸುವ ಮೂಲಕ ಸ್ವಾತಂತ್ರೃ ಹೋರಾಟಗಾರರನ್ನು ಸ್ಮರಿಸಿ ಗೌರವ ಸೂಚಿಸಲಾಯಿತು.


ಪಕ್ಷದ ನಗರ ಘಟಕದ ಅಧ್ಯಕ್ಷ ಜಿ.ಬಸವರಾಜ ರೆಡ್ಡಿ, ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಲವಾರು ಮಹನೀಯರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರೃ ಸಿಕ್ಕಿದೆ. ಗಾಂಧೀಜಿ ನೇತೃತ್ವದಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಯಿಂದ ಬ್ರಿಟಿಷ್‌ರು ದೇಶವನ್ನು ಬಿಟ್ಟು ತೊಲಗುವಂತಾಯಿತು ಎಂದರು.


ಪಕ್ಷದ ಮುಖಂಡರಾದ ಕೆ.ಶಾಂತಪ್ಪ, ಅಮರೇಶಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಬಸವರಾಜ ಪಾಟೀಲ್ ದರೂರ, ಭೀಮನಗೌಡ ನಾಗಡದಿನ್ನಿ, ಆಂಜನೇಯ, ಬಸವರಾಜ ಪಾಟೀಲ್ ಅತ್ತನೂರು, ನವನೀತಾ ಆದೋನಿ, ಶಶಿಕಲಾ ಭೀಮರಾಯ, ಮಂಜುಳಾ, ರಾಣಿ ರಿಚರ್ಡ್, ಶ್ರೀನಿವಾಸ ಪೋತಗಲ್, ಯು.ಗೋವಿಂದರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net