

ರಾಯಚೂರು: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಆಚರಿಸುವ ಮೂಲಕ ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸಿ ಗೌರವ ಸೂಚಿಸಲಾಯಿತು.
ಪಕ್ಷದ ನಗರ ಘಟಕದ ಅಧ್ಯಕ್ಷ ಜಿ.ಬಸವರಾಜ ರೆಡ್ಡಿ ಗಾಂೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವಾರು ಮಹನೀಯರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ ಸಿಕ್ಕಿದೆ. ಗಾಂೀಜಿ ನೇತೃತ್ವದಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳುವಳಿ ಬ್ರಿಟಿಷ್‌ರು ದೇಶವನ್ನು ಬಿಟ್ಟು ತೊಲಗುವಂತಾಯಿತು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕೆ.ಶಾಂತಪ್ಪ, ಅಮರೇಶಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಬಸವರಾಜ ಪಾಟೀಲ್ ದರೂರ, ಭೀಮನಗೌಡ ನಾಗಡದಿನ್ನಿ, ಆಂಜಿನೇಯ, ಬಸವರಾಜ ಪಾಟೀಲ್ ಅತ್ತನೂರು, ನವನೀತ ಆದೋನಿ, ಶಶಿಕಲಾ ಭೀಮರಾಯ, ಮಂಜುಳಾ, ರಾಣಿ ರಿಚರ್ಡ್, ಶ್ರೀನಿವಾಸ ಪೋತಗಲ್, ಯು.ಗೋವಿಂದರೆಡ್ಡಿ ಇದ್ದರು.