

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ತಾಲೂಕಿಗೆ 1,701 ಹಾಗೂ ಯಡ್ರಾಮಿ ತಾಲೂಕಿಗೆ 1,735 ಜನ ವಲಸಿಗರು ಬಂದಿದ್ದಾರೆ. ಅವರ ಆರೋಗ್ಯ ತಪಾಸಣೆ ನಡೆಸಿ, ವಿವಿಧ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಶಾಸಕ ಡಾ. ಅಜಯಸಿಂಗ್ ತಿಳಿಸಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ವಸತಿ ನಿಲಯ, ಯಾಳವಾರ, ಅಂಕಲಗಾ ಕ್ವಾರಂಟೈನ್ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ ಸೌಕರ್ಯ ಪರಿಶೀಲಿಸಿದ ಅವರು, ನಿತ್ಯ 250-300 ಜನ ವಲಸೆ ಕಾರ್ಮಿಕರ ಕಫ ಸಂಗ್ರಹಿಸಿ ಜಿಮ್ಸ್ಗೆ ಕಳಿಹಿಸಲಾಗುತ್ತಿದೆ. ಮೂರು ದಿನಗಳ ನಂತರ ವರದಿ ಅಧಿಕಾರಿಗಳ ಕೈ ಸೇರಲಿದೆ. ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ಕ್ವಾರಂಟೈನ್ನಲ್ಲಿರುವ ವಲಸಿಗರಿಗೆ ಊಟ, ಉಪಾಹಾರ, ಕುಡಿವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ತಹಸೀಲ್ದಾರ್ ಸಿದ್ದರಾಯ ಭೋಸಗಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಪಿಎಸ್ಐ ಮಂಜುನಾಥ ಹೂಗಾರ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ್ ಇಜೇರಿ, ಮುಖಂಡರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಅಬ್ದುಲ್ ರಹೇಮಾನ್ ಪಟೇಲ್, ಮಹಿಮೂದ್ ನೂರಿ ಇದ್ದರು.