ಕ್ಲಿನ್‌ಚಿಟ್ ಪಡೆದು ಮತ್ತೆ ಸಿಎಂ ಆಗಲಿ

ctd--0003v.
Published on

  • ಚಿತ್ರದುರ್ಗ: ಒಂದು ತಪ್ಪು ಸರಿಪಡಿಸಲು ಹೋಗಿ ಹತ್ತಾರು ತಪ್ಪು ಮಾಡದಂತೆ ಈ ಮೊದಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ ಎಂದು ಕೇಂದ್ರದ ರೈಲ್ವೆ ರಾಜ್ಯಸಚಿವ ವಿ. ಸೋಮಣ್ಣ ಹೇಳಿದರು.
    ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡು ಗಾಯ ಮಾಡಿಕೊಂಡಿರುವ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಲಿ. ಕ್ಲಿನ್‌ಚಿಟ್ ಪಡೆದು ಮತ್ತೆ ಸಿಎಂ ಆಗಲಿ ಎಂದು ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರ ಗೌರವವಿದೆ. ಈ ಹಿಂದೆ ಸದನದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಪ್ರಕಟಿಸಬಹುದಾಗಿತ್ತು. ಪ್ರಕರಣ ಈಗ ಒಂದು ಹಂತ ತಲುಪಿದೆ. ಮತ್ತೆ ಅವರು ಚರ್ಚೆಯ ವಸ್ತು ಆಗದೆ ರಾಜೀನಾಮೆ ಕೊಡಲಿ. ಆತ್ಮಸಾಕ್ಷಿಗನುಗುಣ ನಡೆದುಕೊಳ್ಳುತ್ತೇನೆ ಎನ್ನುವ ಸಿದ್ದರಾಮಯ್ಯರ ಕೈಯನ್ನು ಯಾರು ಹಿಡಿದುಕೊಂಡಿಲ್ಲ ಎಂದರು.
    ಭದ್ರಾಮೇಲ್ದಂಡೆ ನೀರಾವರಿ ಯೋಜನೆಗೆ 5300 ಕೋಟಿ ರೂ.ಅನುದಾನ ನೀಡುವ ಮಾತಿ ಗೆ ಬದ್ಧವಿದ್ದೇವೆ.2-3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಒಂದೂವರೆ ತಿಂಗಳಲ್ಲಿ ಮೊದಲ ಕಂತು ಬಿಡುಗಡೆ ಆಗಲಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಒಂದಷ್ಟು ನಿಯಮಗಳಿವೆ. ಯೋಜನೆ ಅನುಷ್ಠಾನವಾದರೆ ಬರಡು ಭೂಮಿ ಚಿತ್ರದುರ್ಗ ಸಹಿತ ನಾನಾ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net