ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

25 gkp 01
Published on
  • ಗೋಣಿಕೊಪ್ಪ : ಪೊನ್ನಪ್ಪಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಯಮುಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
    ಮಾಯಮುಡಿ, ಪೊನ್ನಪ್ಪಸಂತೆ ವ್ಯಾಪ್ತಿಯ ನಲ್ಲೂರು ಕಿರಿಯ ಪ್ರಾಥಮಿಕ, ಪೊನ್ನಪ್ಪಸಂತೆ, ಚೆನ್ನಂಗೊಲ್ಲಿ, ಧನುಗಾಲ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.

  • ಪೊನ್ನಪ್ಪಸಂತೆ ಗ್ರಾ.ಪಂ. ಅಧ್ಯಕ್ಷೆ ಚಿಯಕ್‌ಪೂವಂಡ ಪ್ರಭಾ ಚಿಣ್ಣಪ್ಪ ಉದ್ಘಾಟಿಸಿದರು. ಪಿಡಿಒ ಸುರೇಶ, ಸದಸ್ಯ ವಿನುಚಂಗಪ್ಪ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ರಜನಿ, ಕ್ಷೇತ್ರ ಸಂಪನ್ಮೂಲ ಸಮನ್ವಯಧಿಕಾರಿ ವನಜಾಕ್ಷಿ, ದಾನಿ ಅದೇಂಗಡ ಸಂತೋಷ್, ಸೋಮಣ್ಣ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕುಮಾರ್, ತಾಲೂಕು ಅಧ್ಯಕ್ಷ ಈ.ಸುರೇಂದ್ರ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಯವಂಡ ಉತ್ತಪ್ಪ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಾಡ್ಯಮಡ ಸುಬ್ಬಯ್ಯ, ಮುಖ್ಯಶಿಕ್ಷಕಿ ರಾಧಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net