

ಹಾಸನ: ಕ್ಲಬ್‌ನಲ್ಲಿ ಪೋಲಿಸ್ ಅಧಿಕಾರಿಗಳಿಂದ ದುರ್ವರ್ತನೆ ಆರೋಪ ಹಿನ್ನೆಲೆಯಲ್ಲಿ ಇಬ್ಬರು ಇನ್ಸ್‌ಪೆಕ್ಟರ್, ಓರ್ವ ಸಬ್‌ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಆದೇಶ ಹೊರಡಿಸಿದ್ದಾರೆ.
ಬೇಲೂರು ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ರಮಣ್ಯ, ಹಳೇಬೀಡು ಸರ್ಕಲ್ ಇನ್ಸ್‌ಪೆಕ್ಟರ್ ಜಯರಾಂ, ಬೇಲೂರು ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಅಮಾನತುಗೊಂಡವರು.
ಸೆ.3 ರಂದು ಬೇಲೂರಿನ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಪಾರ್ಟಿ ಮಾಡಿದ್ದರು. ಅಲ್ಲಿ ಊಟದ ನಂತರ ಕ್ಲಬ್‌ನ ಸಿಬ್ಬಂದಿಗಳೊಂದಿಗೆ ದರ್ಪ ತೋರಿ ಬೆದರಿಕೆ ಹಾಕಿದ್ದರುವ ಆರೋಪ ಕೇಳಿ ಬಂದು ಮತ್ತು ಅಧಿಕಾರಿಗಳ ದುರ್ವರ್ತನೆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಹಿನ್ನೆಲೆಯಲ್ಲಿ ಎಸ್ಪಿ ಕ್ರಮ ಕೈಗೊಂಡಿದ್ದಾರೆ.
ಹಳೇಬೀಡು ವೃತ್ತ ನಿರೀಕ್ಷಕ ಜಯರಾಮ್ ಅವರು ಪೊಲೀಸ್ ಸೇವೆಯಲ್ಲಿ 17 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಗಾಗಿ ಸ್ನೇಹಿತರಿಗೆ ಔತಣಕೂಟ ಏರ್ಪಡಿಸಿದ್ದರು. ಬೇಲೂರಿನ ಚಿಕ್ಕಮಗಳೂರು ರಸ್ತೆಯಲ್ಲಿರುವ ಪ್ಲಾಂಟರ್ಸ್ ಕ್ಲಬ್‌ಗೆ ತೆರಳಿದ್ದ ಮೂವರು ಅಧಿಕಾರಿಗಳು ಕರ್ತವ್ಯದ ಅವಧಿಯಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೆ ಮದ್ಯ ಸೇವನೆ ಪಾಟಟಿ ಮಾಡಿದ್ದಾರೆ. ನಂತರ ರಾತ್ರಿ ಊಟದ ಬಿಲ್ ನೀಡುವ ವಿಚಾರವಾಗಿ ಕ್ಲಬ್ ಸಿಬ್ಬಂದಿ ಜೊತೆಗೆ ಜಗಳ ಮಾಡಿಕೊಂಡಿದ್ದಾರೆ. ವಾಗ್ವಾದದ ದೃಶ್ಯಾವಳಿ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.